RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ದಿ. ಬಿ.ಆರ್.ಅರಿಶಿಣಗೋಡಿ ಹಾಗೂ ದೀ. ಬಸವಣ್ಯಪ್ಪ ಹೋಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ

ಗೋಕಾಕ:ದಿ. ಬಿ.ಆರ್.ಅರಿಶಿಣಗೋಡಿ ಹಾಗೂ ದೀ. ಬಸವಣ್ಯಪ್ಪ ಹೋಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ 

ದಿ. ಬಿ.ಆರ್.ಅರಿಶಿಣಗೋಡಿ ಹಾಗೂ ದೀ. ಬಸವಣ್ಯಪ್ಪ ಹೋಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 6 :
ಆಶಾ ಕಿರಣ ಕಲಾ ಟ್ರಸ್ಟ್ ನಿಂದ ಗೋಕಾವಿ ನಾಡಿನ ವೃತ್ತಿ ರಂಗಭೂಮಿ ಹಿರಿಯ ಕಲಾವಿದರಾದ ದಿವಂಗತ ಬಿ.ಆರ್.ಅರಿಶಿಣಗೋಡಿ ಹಾಗೂ ದಿವಂಗತ ಬಸವಣ್ಯಪ್ಪ ಹೋಸಮನಿ ರಂಗ ಸ್ಮರಣೋತ್ಸವ ನಿಮಿತ್ತ ಉಪನ್ಯಾಸ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭವು ದಿನಾಂಕ 7 ರಂದು ಮುಂಜಾನೆ 11 ಘಂಟೆಗೆ ನಗರದ ಆಧ್ಯಾತ್ಮ ಜ್ಞಾನ ಮಂದಿರದಲ್ಲಿ ಜರುಗಲಿದೆ.

ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದು, ಜ್ಞಾನ ಮಂದಿರದ ಧರ್ಮದರ್ಶಿ ಸುವರ್ಣತಾಯಿ ಹೊಸಮಠ ಉದ್ಘಾಟಿಸಲಿದ್ದಾರೆ. ಚಲನಚಿತ್ರ ಹಾಗೂ ರಂಗಭೂಮಿ ಹಿರಿಯ ಕಲಾವಿದೆ ರೇಖಾದಾಸ ಪ್ರಶಸ್ತಿ ಪ್ರಧಾನ ಮಾಡಲಿದ್ದು, ಅಧ್ಯಕ್ಷತೆಯನ್ನು ಅಶೋಕ ಪೂಜಾರಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾಂವಶಿ, ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯಾಧ್ಯಕ್ಷೆ ರಜನಿ ಜಿರಗ್ಯಾಳ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ರಂಗಭೂಮಿ ದ್ರೋಣ ದಿವಂಗತ ಬಿ.ಆರ್.ಅರಶಿಣಗೋಡಿ ರಂಗ ಪ್ರಶಸ್ತಿಯನ್ನು ಜಮಖಂಡಿಯ ಹಿರಿಯ ನಾಟಕಕರ್ತರಾದ ಸಂಗಮೇಶ ಗುರವ ಹಾಗೂ ರಂಗಭೂಮಿ ಭೀಷ್ಮ ದಿವಂಗತ ಬಸವಣೆಪ್ಪಾ ಹೋಸಮನಿ ರಂಗ ಪ್ರಶಸ್ತಿಯನ್ನು ಶಿವಾಪೂರದ ಹಿರಿಯ ಜಾನಪದ ಕಲಾವಿದ ಬಸವಣೆಪ್ಪಾ ಕಬಾಡಗಿ ಇವರಿಗೆ ನೀಡಿ ಗೌರವಿಸಲಾಗುವದು ಎಂದು ಕಲಾ ಟ್ರಸ್ಟ್ ನ ಅಧ್ಯಕ್ಷೆ ಮಾಲತಿಶ್ರೀ ಮೈಸೂರು ಪ್ರಕಟಣೆಯಲ್ಲಿ  ಕೋರಿ , ಕಲಾವಿದರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳುವಂತೆ ವಿನಂತಿಸಿದ್ದಾರೆ.

Related posts: