ಗೋಕಾಕ:ತರುಣರು ಮಾನಸಿಕವಾಗಿ ಸದೃಢತೆಯನ್ನು ಹೊಂದಿ ದೇಶವನ್ನು ಕಟ್ಟಬೇಕಾಗಿದೆ : ಆರ್.ಎಸ್.ಎಸ್.ಪ್ರಮುಖ ಅರವಿಂದ ದೇಶಪಾಂಡೆ
ತರುಣರು ಮಾನಸಿಕವಾಗಿ ಸದೃಢತೆಯನ್ನು ಹೊಂದಿ ದೇಶವನ್ನು ಕಟ್ಟಬೇಕಾಗಿದೆ : ಆರ್.ಎಸ್.ಎಸ್.ಪ್ರಮುಖ ಅರವಿಂದ ದೇಶಪಾಂಡೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 6 :
ತರುಣರು ಮಾನಸಿಕವಾಗಿ ಸದೃಢತೆಯನ್ನು ಹೊಂದಿ ದೇಶವನ್ನು ಕಟ್ಟಬೇಕಾಗಿದೆ ಎಂದು ಯುವ ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉತ್ತರ ಪ್ರಾಂತ ಸಹ ಸಂಘ ಚಾಲಕ ಅರವಿಂದ ದೇಶಪಾಂಡೆ ಹೇಳಿದರು
ರವಿವಾರದಂದು ನಗರದ ಚನ್ನಬಸವೇಶ್ವರ ವಿದ್ಯಾ ಪೀಠದ ಆವರಣದಲ್ಲಿ ಶೂನ್ಯ ಸಂಪಾದನ ಮಠದ ಲಿಂಗೈಕ್ಯ ಶ್ರೀ ಬಸವ ಮಹಾಸ್ವಾಮಿಗಳ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಂಡ 17ನೇ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನದ ಯುವ ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ತರುಣರನ್ನು ಸಾಮಾಜಿಕವಾಗಿ, ರಾಷ್ಟ್ರೀಯವಾಗಿ ಸಮಾನವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ಮಠಗಳ ಮೇಲಿದೆ. ಇಂದು ಜಗತ್ತು ನಮ್ಮ ದೇಶದ ಕಡೆ ಗಮನಕೊಟ್ಟು ನೋಡುತ್ತಿದೆ. ಜಗತ್ತಿನ ಸಂಶೋಧನಾ ಕ್ಷೇತ್ರದಲ್ಲಿ ಭಾರತದ ಯುವಕರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಅಮೇರಿಕಾದಲ್ಲಿ 50 % ಪ್ರತಿಷ್ಠಿತ ಭಾರತದ ಯುವಕರು ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಪವಿತ್ರ ದೇಶದಲ್ಲಿ ನಾವು ಹುಟ್ಟಿರುವದು ನಮ್ಮ ಸೌಭಾಗ್ಯ.
ಇಡೀ ಜಗತ್ತಿಗೆ ಯೋಗದ ಕಲ್ಪನೆಯನ್ನು ಕೊಟ್ಟ ದೇಶ ನಮ್ಮದು, ಇದನ್ನು ಮುಸ್ಲಿಂ ರಾಷ್ಟ್ರಗಳು ಸಹ ಅಳವಡಿಸಿಕೊಂಡಿವೆ. ಇದು ನಮ್ಮ ದೇಶದ ಗಣನೀಯ ಸಾಧನೆಯಾಗಿದೆ. ಭಾರತದ ಆರ್ಥಿಕತೆ ಬಗ್ಗೆ ಇಡೀ ಜಗತ್ತು ಚಿಂತನೆ ಮಾಡುತ್ತಿದೆ ಇದರ ಬಗ್ಗೆ ಯುವಕರು ಅರಿತು ದೇಶದ ಬಗ್ಗೆ ಅಭಿಮಾನ ಹೊಂದಬೇಕು.
ಮಾತೃ ಭಾಷೆಯ ಬಗ್ಗೆ ಯುವಕರು ಗಮನ ಹರಿಸಿ ನಶಿಸಿ ಹೋಗುತ್ತಿರುವ ಕನ್ನಡ ಭಾಷೆಯನ್ನು ಉಳಿಸಿ ಬೆಳಸಬೇಕಾಗಿದೆ. ಇದನ್ನು ಚಳುವಳಿಯ ರೂಪದಲ್ಲಿ ನಾವು ಮಾಡಬೇಕಾಗಿದೆ. ಪಾಲಕರು ಸಹ ತಮ್ಮ ಮಕ್ಕಳಿಗೆ ಮಾತೃಭಾಷೆಯ ಬಗ್ಗೆ ಆಸಕ್ತಿ ತೊರುವ ಕಾರ್ಯ ಮಾಡಬೇಕಾಗಿದೆ. ಆಂಗ್ಲ ಭಾಷೆ ಇಂದು ನಮ್ಮ ಕನ್ನಡ ಭಾಷೆಯ ಮೇಲೆ ಆಕ್ರಮಣ ಮಾಡುತ್ತಿದೆ ಇದರ ಬಗ್ಗೆ ಸಹ ಮಠ- ಮಾನ್ಯಗಳು ಕಾಳಜಿ ಮುತುವರ್ಜಿವಹಿಸಿ ಕಾರ್ಯ ಮಾಡಿ ಕನ್ನಡ ಭಾಷೆಯನ್ನು ಉಳಿಸಲು ಮುಂದಾಗಬೇಕು.
ಯುವಕರಲ್ಲಿ ಭಾರತದ ಬಗ್ಗೆ ಕೀಳರಿಮೆಯಿದೆ ಇದರಿಂದ ಯುವಕರು ಹೊರಬಂದು ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಅವಶ್ಯಕತೆ ಇದೆ. ಒಗತ್ತಿಗೆ ಆರ್ದಶವನ್ನು ಕೊಡುವ ಕಾರ್ಯ ಇಂದು ನಮ್ಮ ದೇಶ ಮಾಡುತ್ತಿದೆ.
ಮತ್ತೊಮ್ಮೆ ನಮ್ಮ ದೇಶ ಜಗತ್ತಗುರು ವಾಗಬೇಕಾದರೆ ಯುವಕರು ಮುಂದೆ ಬರಬೇಕಾಗಿದೆ ಆ ದಿಸೆಯಲ್ಲಿ ಯುವಕರು ಮುನ್ನುಗ್ಗಬೇಕು ಎಂದ ಅವರು ನಮ್ಮ ಇತಿಹಾಸ ಪರಂಪರೆಗೆ ಕಳಶ ವಿಟ್ಟಂತೆ ಶೂನ್ಯ ಸಂಪಾದನ ಮಠದ ಶರಣ ಸಂಸ್ಕೃತಿ ಉತ್ಸವ ಕಾರ್ಯ ಮಾಡುತ್ತಿದೆ ಈ ಕಾರ್ಯಕ್ರಮ ರಾಜ್ಯ ಉತ್ಸವವಾಗಿ ಹೋರಹೊಮ್ಮಲ್ಲಿ ಎಂದು ಹಾರೈಸಿದರು.
ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಇಂದಿನ ತಂತ್ರಜ್ಞಾನ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದ್ದೆ. ತಂದೆ ತಾಯಿಯವರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕಾಗಿದೆ . ಉನ್ನತ ವ್ಯಾಸಂಗ ಮಾಡುತ್ತಿರುವ ಯುವಕರು ಇಂದು ಸಂಸ್ಕಾರದಿಂದ ವಂಚಿತವಾಗುತ್ತಿದ್ದಾರೆ. ಅಧಿಕಾರದಾಹ ಮತ್ತಿಗೇರಿದೆ , ಸಮಾಜ, ಕುಟುಂಬ, ದೇಶಕ್ಕಾಗಿ ಏನು ಮಾಡಬೇಕು ಎಂಬ ಸಂಕಲ್ಪ ಮಾಡುವ ಯುವಕರ ಸಂಖ್ಯೆ ಕಡಿಮೆಯಾಗಿದೆ. ನಾವು ನಮ್ಮ ಕುಟುಂಬಕ್ಕೆ, ನನ್ನ ಸಮಾಜಕ್ಕೆ, ನನ್ನ ದೇಶಕ್ಕೆ ಏನು ಕೊಟ್ಟಿದ್ದೇನೆ ಎಂದು ವಿಚಾರ ಮಾಡಬೇಕು. ದೇಶದ ಬದಲಾವಣೆ ಯುವಕರ ಮೇಲಿದೆ ಅದನ್ನು ಅರಿತು ಯುವಕರು ಒಳ್ಳೆಯ ಸಮಾಜವನ್ನು ಕಟ್ಪುವ ಕನಸ್ಸು ಕಾಣಬೇಕು ಎಂದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬಾಳೆಹೊಸೂರಿನ ದಿಂಗಾಲೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರನ್ನು ಸತ್ಕರಿಸಿ,ಗೌರವಿಸಲಾಯಿತು.
ವೇದಿಕೆಯ ಮೇಲೆ ಕಾರ್ಯಕ್ರಮದ ನೇತೃತ್ವ ವಹಿಸಿದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಫಲಾರೇಶ್ವರಮಠ ಅವರಾಧಿಯ ಶಿವಮೂರ್ತಿ ಮಹಾಸ್ವಾಮಿಗಳು, ಶಿವಮೂರ್ತೇಶ್ವರ ಮಠ ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು, ಭೀಮಪ್ಪ ಗಡಾದ, ಬಸವರಾಜ ಹುಳ್ಳೇರ, ಮಹಾಂತೇಶ ವಕ್ಕುಂದ, ಡಾ.ಅರುಣ ತುಪ್ಪದ, ಉತ್ಸವ ಸಮಿತಿ ಅಧ್ಯಕ್ಷ ಚನ್ನಮಲ್ಲಪ್ಪ ವಾಲಿ, ಸಚೀನ ಮೈಲಾರಲಿಂಗ ಉಪಸ್ಥಿತರಿದ್ದರು.
ಕೊನೆಯಲ್ಲಿ ಮಂಗಳೂರಿನ ಸಾಯಿರಾಮನ್ ನೃತ್ಯ ಕೇಂದ್ರದ ವತಿಯಿಂದ “ದೇಶ ಮೊದಲ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.