ಗೋಕಾಕ:ಗಜಲ್ ಸಾಹಿತ್ಯವೆಂದರೆ ಆತ್ಮದ ಧ್ಯಾನವಾಗಿದೆ :ಗಜಲ್ ಕವಿ ಸಾವನ್ ಕೆ. ಅಭಿಪ್ರಾಯ
ಗಜಲ್ ಸಾಹಿತ್ಯವೆಂದರೆ ಆತ್ಮದ ಧ್ಯಾನವಾಗಿದೆ :ಗಜಲ್ ಕವಿ ಸಾವನ್ ಕೆ. ಅಭಿಪ್ರಾಯ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 7 :
ಗಜಲ್ ಸಾಹಿತ್ಯವೆಂದರೆ ಆತ್ಮದ ಧ್ಯಾನವಾಗಿದ್ದು ಅದನ್ನು ಅನುಭವಿಸಿ ಬರೆಯಬೇಕು, ಗಜಲ್ ಗಳು ಪ್ರೇಮ ವಿರಹ ಭಾವದ ಜತೆಗೆ ಸಮಾಜ ಮುಖಿಯ ಚಿಂತನೆಗಳಿಂದ ಕೂಡಿದ್ದು ಓದುಗರ ಗಮನ ಸೆಳೆಯುತ್ತವೆ ಎಂದು ರಾಯಚೂರು ಜಿಲ್ಲೆಯ ಸಿಂಧನೂರಿನ ಗಜಲ್ ಕವಿ ಸಾವನ್ ಕೆ ಅಭಿಪ್ರಾಯಪಟ್ಟರು.
ರವಿವಾರದಂದು ನಗರದಲ್ಲಿ ಸಿರಿಗನ್ನಡ ವೇದಿಕೆ, ಸಿರಿಗನ್ನಡ ಮಹಿಳಾ ವೇದಿಕೆ ಜಿಲ್ಲಾ ಹಾಗೂ ತಾಲೂಕು ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಈಶ್ವರ ಮಮದಾಪೂರ ಅವರ ಗೋರಿಯೋಳಗಿನ ಉಸಿರು ಗಜಲ್ ಕೃತಿ ವಿರ್ಮಶೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇತ್ತೀಚೆಗೆ ಗಜಲ್ ಕವಿತೆಗಳು ಹೆಚ್ಚು ಆಕರ್ಷಿತವಾಗುತ್ತಿದ್ದು ಬಹುತೇಕ ಕವಿಗಳು ಗಜಲ್ ಕಡೆಗೆ ವಾಲುತ್ತಿರುವುದು ಖುಷಿಯ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ ಈಶ್ವರ ರವರ ಗಜಲ್ ಗಳು ಆಪ್ತತೆಯನ್ನು ಹುಟ್ಟಿಸುತ್ತವೆ ಎಂದರು.
ರಂಗ ಕಲಾವಿದೆ ಮಾಲತಿ ಶ್ರೀ ಮೈಸೂರ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಸಿರಿಗನ್ನಡ ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷೆ ರಜನಿ ಜೀರಗ್ಯಾಳ ವಹಿಸಿದ್ದರು
ಈಶ್ವರ ಮಮದಾಪೂರ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಹಾಂತೇಶ ತಾಂವಶಿ ಹಾಗೂ ಹುಬ್ಬಳ್ಳಿ ಸಿದ್ದಾರೂಢ ಟ್ರಸ್ಟ್ ಕಮಿಟಿಯ ಧರ್ಮದರ್ಶಿಗಳಾದ ಶಾಮಾನಂದ ಪೂಜೇರಿ,ಡಾ. ಅಶೋಕ್ ಜೀರಾಗ್ಯಳ ಅವರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರ ಕಾರ್ಯಾಲಯದ ಕನ್ನಡ ವಿಷಯ ಪರಿವೀಕ್ಷಕರಾದ ಅರಿಹಂತ ಬಿರಾದಾರ ಪಾಟೀಲ,ಸಿರಿಗನ್ನಡ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಜಯಾ ಚುನಮರಿ ಇದ್ದರು.