RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಮಹಿಳೆಯರಿಗೆ ಇಂದು ಸಮಾನ ಸ್ಥಾನ ಮಾನಗಳಿದ್ದು, ತಮ್ಮ ನಡೆ ನುಡಿಗಳಿಂದ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಹೆಚ್ಚಿಸಿ : ಜಯಶ್ರೀ ಮಳಗಿ

ಗೋಕಾಕ:ಮಹಿಳೆಯರಿಗೆ ಇಂದು ಸಮಾನ ಸ್ಥಾನ ಮಾನಗಳಿದ್ದು, ತಮ್ಮ ನಡೆ ನುಡಿಗಳಿಂದ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಹೆಚ್ಚಿಸಿ : ಜಯಶ್ರೀ ಮಳಗಿ 

ಮಹಿಳೆಯರಿಗೆ ಇಂದು ಸಮಾನ ಸ್ಥಾನ ಮಾನಗಳಿದ್ದು, ತಮ್ಮ ನಡೆ ನುಡಿಗಳಿಂದ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಹೆಚ್ಚಿಸಿ : ಜಯಶ್ರೀ ಮಳಗಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 8 :

 
ಮಹಿಳೆಯರಿಗೆ ಇಂದು ಸಮಾನ ಸ್ಥಾನ ಮಾನಗಳಿದ್ದು, ತಮ್ಮ ನಡೆ ನುಡಿಗಳಿಂದ ಸಮಾಜದಲ್ಲಿ ಮಹಿಳೆಯರ ಗೌರವವನ್ನು ಹೆಚ್ಚಿಸುವಂತೆ ನಿವೃತ್ತ ಶಿಕ್ಷಕಿ ಜಯಶ್ರೀ ಮಳಗಿ ಹೇಳಿದರು

ಮಂಗಳವಾರದಂದು ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಮಹಿಳಾ ಸಬಲೀಕರಣ ಘಟಕಗಳಿಂದ ಹಮ್ಮಿಕೊಂಡ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‌ಸಮಾಜದಲ್ಲಿ ಅತ್ಯಂತ ಜವಾಬ್ದಾರಿ ಸ್ಥಾನದಲ್ಲಿರುವ ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಒಳ್ಳೆಯ ನಾಗರಿಕರನ್ನಾಗಿ ರೂಪಿಸಿ ದೇಶಕ್ಕೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಐ.ಎಸ್.ಪವಾರ, ಉಪನ್ಯಾಸಕಿಯರಾದ ಎಂ.ಯೂ ಕುಂಬಾರ, ಎಂ.ವೈ.ಪಾಟೀಲ, ವಿದ್ಯಾರ್ಥಿ ಪ್ರತಿನಿಧಿಗಳಾದ ಅಮಿನಾ ಹುಕ್ಕೇರಿ, ಸ್ವೇತಾ ವಟಾರಾ ಸೇರಿದಂತೆ ಅನೇಕರು ಇದ್ದರು.

Related posts: