ಗೋಕಾಕ:ವಿದ್ಯಾರ್ಥಿಗಳು ಗೈಡಗಳಿಗೆ ಸಿಮೀತವಾಗದೆ ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಿ : ಶೃತಿ ಪಾಟೀಲ
ವಿದ್ಯಾರ್ಥಿಗಳು ಗೈಡಗಳಿಗೆ ಸಿಮೀತವಾಗದೆ ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಿ : ಶೃತಿ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 9 :
ವಿದ್ಯಾರ್ಥಿಗಳು ಗೈಡಗಳಿಗೆ ಸಿಮೀತವಾಗದೆ ಪಠ್ಯ ಪುಸ್ತಕಗಳನ್ನು ಅಧ್ಯಯನ ಮಾಡಿ ಜ್ಞಾನ ಪಟ್ಟವನ್ನು ಹೆಚ್ಚಿಸಿಕೊಂಡು ಸಾಧಕರಾಗುವಂತೆ 2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಘಟಪ್ರಭಾದ ಶೃತಿ ಪಾಟೀಲ ಹೇಳಿದರು.
ಬುಧವಾದಂದು ನಗರದ ಶ್ರೀ ಲಕ್ಷ್ಮಣರಾವ್ ಜಾರಕಿಹೊಳಿ ಪ್ರೌಢಶಾಲೆಯ ಸಭಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ವಿವಿಧ ಶಾಲೆಗಳ ಎಸ್.ಎಸ್.ಎಲ್.ಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳನ್ನೇ ಓದಬೇಕು. ಅರ್ಥವಾಗದ ವಿಷಯಗಳನ್ನು ಶಿಕ್ಷಕರಿಂದ ಕೇಳಿ ತಿಳಿದುಕೊಳ್ಳಿ. ಪರೀಕ್ಷೆಗಳಲ್ಲಿ ಉತ್ತರಗಳನ್ನು ಯಾವ ರೀತಿ ಬರೆಯಬೇಕು ಎಂಬುದರ ಮಾರ್ಗದರ್ಶನ ಪಡೆದು ಆತ್ಮವಿಶ್ವಾಸದಿಂದ ಧೈರ್ಯವಾಗಿ ಪರೀಕ್ಷೆಯಲ್ಲಿ ಪಾಲ್ಗೊಂಡರೆ ಯಶಸ್ಸು ನಿಶ್ಚಿತವೆಂದು ಶೃತಿ ಪಾಟೀಲ ತಮ್ಮ ಅನುಭಗಳನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿ ಶೃತಿ ಪಾಟೀಲ ಅವರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಬಿಇಒ ಜಿ.ಬಿ.ಬಳಗಾರ, ಎಸ್.ಎಲ್.ಜೆ ಪಿಯು ಕಾಲೇಜಿನ ಪ್ರಾಚಾರ್ಯ ಅರುಣ ಪೂಜೇರಾ, ನೋಡಲ್ ಅಧಿಕಾರಿ ಬಿ.ಎಂ ವಣ್ಣೂರ, ಮುಖ್ಯೋಪಾಧ್ಯಾಯರಾದ ಬಿ.ಕೆ ಕುಲಕರ್ಣಿ ,ಗೋಪಾಲ ಮಾಳಗಿ ಇದ್ದರು.