ಗೋಕಾಕ:ಇಂದು ವಿದ್ಯಾರ್ಥಿಗಳಿಗೆ ಚಾರಿತ್ರ್ಯ ನಿರ್ಮಾಣದ ಶಿಕ್ಷಣದ ಅಗತ್ಯವಿದೆ : ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ
ಇಂದು ವಿದ್ಯಾರ್ಥಿಗಳಿಗೆ ಚಾರಿತ್ರ್ಯ ನಿರ್ಮಾಣದ ಶಿಕ್ಷಣದ ಅಗತ್ಯವಿದೆ : ಹಿರಿಯ ಸಾಹಿತಿ ಡಾ.ವಿ.ಎಸ್.ಮಾಳಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 12 :
ಇಂದು ವಿದ್ಯಾರ್ಥಿಗಳಿಗೆ ಚಾರಿತ್ರ್ಯ ನಿರ್ಮಾಣದ ಶಿಕ್ಷಣದ ಅಗತ್ಯವಿದ್ದು, ಕೇವಲ ಮಾಹಿತಿ ಕೇಂದ್ರಿತ ಶಿಕ್ಷಣವು ವ್ಯಕ್ತಿತ್ವವನ್ನು ಪರಿಪೂರ್ಣ ಗೊಳಿಸುವುದಿಲ್ಲ ವೆಂದು ಸಾಹಿತಿ ಡಾ.ವಿ.ಎಸ್.ಮಾಳಿ ಹೇಳಿದರು
ಶುಕ್ರವಾರದಂದು ನಗರದಲ್ಲಿ ಜರುಗಿದ ಜ್ಞಾನದೀಪ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡುಗೆ, ಕ್ರೀಡೆ ಹಾಗೂ ವಿವಿಧ ಸಂಘ ಚಟುವಟಿಕೆಗಳ ಮುಕ್ತಾಯ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈಗ ನಾವು ವೃತ್ತಿಆಧಾರಿತ ಶಿಕ್ಷಣದೆಡೆಗೆ ಒಲುವು ತೋರುತ್ತಿದ್ದು, ಮಾನವೀಯ ಮೌಲ್ಯಗಳು . ವೃತ್ತಿ ಆಧಾರಿತ ಶಿಕ್ಷಣ ನೀಡುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವ, ಸಾಮಾಜಿಕ ನ್ಯಾಯದ ಅರಿವು ಮೂಡಿಸುವ ಹಾಗೂ ಸುಸಂಸ್ಕೃತ ನಾಗರೀಕತೆಯನ್ನು ನಿರ್ಮಿಸುವ ಶಿಕ್ಷಣ ನೀಡುವ ಅಗತ್ಯವಿದೆ. ಶಿಕ್ಷಕ ಮಾಹಿತಿಗಳನ್ನು ಪಠ್ಯದಿಂದ ವಿದ್ಯಾರ್ಥಿಗಳಿಗೆ ಪೂರೈಸುವ ಪರಿವರ್ತಕವಲ್ಲ. ಶಾಲೆ ಮಾನವೀಯತೆಯನ್ನು ಬೆಳೆಸುವ ಕಮ್ಮಟವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಆರ್.ಎಂ ವಾಲಿ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಲಲಿತ ಕುಮಾರ , ವಿದ್ಯಾ ಪತ್ತಾರ, ರಚನಾ ಹಾಗೂ ರೋಹಿಣಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಪ್ರಾಚಾರ್ಯ ಆರ್.ಜಿ.ಭರಭರಿ, ಪ್ರೋ ಜಿ.ವ್ಹಿ ಮಳಗಿ , ಜಯಶ್ರಿ ಕರಿಗಾರ, ಇದ್ದರು.
ಕಾರ್ಯಕ್ರಮವನ್ನು ಪ್ರೋ ದಿವ್ಯಾ ದಿಕ್ಷೀತ ನಿರೂಪಿಸಿದರು. ಕುಮಾರಿ ಅನಿತಾ ಪಾಟೀಲ ವಂದಿಸಿದರು.