RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಹಲಗಿ ಹಬ್ಬಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

ಗೋಕಾಕ:ಹಲಗಿ ಹಬ್ಬಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ 

ಹಲಗಿ ಹಬ್ಬಕ್ಕೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 13 :

 
ಹಿಂದು ಜಾಗರಣ ವೇದಿಕೆಯವರು ನಗರದಲ್ಲಿ ಹಮ್ಮಿಕೊಂಡ ಗೋಕಾಕ ಬೃಹತ್ ಹಲಗಿ ಹಬ್ಬಕ್ಕೆ ಇಲ್ಲಿಯ ಕೊಳವಿ ಹನುಮಾನ ದೇವಸ್ಥಾನದ ಮುಂಭಾಗದಲ್ಲಿ ರವಿವಾರದಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಚಾಲನೆ ನೀಡಿದರು.
ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ಧ ಯುವಕರು ಹಲಗೆಗಳನ್ನು ಬಾರಿಸುತ್ತ ಭಾರತ ಮಾತೆಯ ಭಾವಚಿತ್ರದೊಂದಿಗೆ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ನಗರದ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕುಂದರಗಿಯ ಶ್ರೀ ಅಮರಸಿದ್ಧೇಶ್ವರ ಮಹಾಸ್ವಾಮಿಗಳು, ಹೂಲಿಕಟ್ಟಿಯ ಕುಮಾರದೇವರು, ತವಗದ ಶ್ರೀ ಸಿದ್ಧಲಿಂಗಯ್ಯ ಸ್ವಾಮಿಗಳು, ಕಪರಟ್ಟಿಯ ಬಸವರಾಜ ಹಿರೇಮಠ, ಜಾಗರಣ ವೇದಿಕೆಯ ಪ್ರಮುಖರಾದ ಎಮ್ ಡಿ ಚುನಮರಿ, ಎಮ್ ವೈ ಹಾರೂಗೇರಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ಮಂಡಲಗಳ ಅಧ್ಯಕ್ಷರುಗಳಾದ ಭೀಮಶಿ ಭರಮನ್ನವರ, ರಾಜೇಂದ್ರ ಗೌಡಪ್ಪಗೋಳ, ಮುಖಂಡರುಗಳಾದ ರಾಮಚಂದ್ರ ಕಾಕಡೆ, ಮಹಾಂತೇಶ ತಾಂವಶಿ ಸೇರಿದಂತೆ ಅನೇಕರು ಇದ್ದರು.

Related posts: