RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ದಿನಾಂಕ 19 ಮತ್ತು 20 ರಂದು ಫಾಲ್ಸ ದಲ್ಲಿ ಶ್ರೀ ಸಂತ ತುಕಾರಾಮ ಮಹಾರಾಜರ ವೈಕುಂಠಗಮನ ಸೊಳಹಾ

ಗೋಕಾಕ:ದಿನಾಂಕ 19 ಮತ್ತು 20 ರಂದು ಫಾಲ್ಸ ದಲ್ಲಿ ಶ್ರೀ ಸಂತ ತುಕಾರಾಮ ಮಹಾರಾಜರ ವೈಕುಂಠಗಮನ ಸೊಳಹಾ 

ದಿನಾಂಕ 19 ಮತ್ತು 20 ರಂದು ಫಾಲ್ಸ ದಲ್ಲಿ ಶ್ರೀ ಸಂತ ತುಕಾರಾಮ ಮಹಾರಾಜರ ವೈಕುಂಠಗಮನ ಸೊಳಹಾ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 14 :

 
ತಾಲೂಕಿನ ಗೋಕಾಕ ಫಾಲ್ಸ್ ದ ಶ್ರೀ ರಾಮ ಮಂದಿರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಿನಾಂಕ 19 ಮತ್ತು 20 ರಂದು ಶ್ರೀ ಸಂತ ತುಕಾರಾಮ ಮಹಾರಾಜರ ವೈಕುಂಠಗಮನ ಸೊಳಹಾ ಜರುಗುವದು.

ದಿನಾಂಕ 19 ರಂದು ಪಾಲ್ಗುಣ ಕೃಷ್ಣ ಪ್ರತಿಪದಾ ಮುಂಜಾನೆ 6: 30 ಕ್ಕೆ ಪೋತಿ ಸ್ಥಾಪನೆ. 7:30ಕ್ಕೆ ಶ್ರೀ ಜಾನೇಶ್ವರ ಗ್ರಂಥ ಪಾರಾಯಣ 1ನೇ ಮತ್ತು 18ನೇ ಅಧ್ಯಾಯ ಜರಗುವದು. 11:30ಕ್ಕೆ ಹರಿಪಾಠ, ಮಧ್ಯಾಹ್ನ 3 ಘಂಟೆಗೆ ಶಿವ ಭಜನಾ , 5 ಘಂಟೆಗೆ ಪ್ರವಚನ , ಸಾಯಂಕಾಲ 7 ಘಂಟೆಗೆ ಹರಿ ಕೀರ್ತನ ಕಾರ್ಯಕ್ರಮ ಜರುಗುವದು.
ದಿನಾಂಕ 20 ರಂದು ಪಾಲ್ಗುಣ ಕೃಷ್ಣ ದ್ವಿತೀಯಾ ಬೆಳಿಗ್ಗೆ 5 ಘಂಟೆಗೆ ಕಾಕಡ ಆರತಿ, ಮುಂಜಾನೆ 8 ಘಂಟೆಗೆ ದಿಂಡಿ ಸೋಳಹಾ ಹಾಗೂ ಪಲ್ಲಕ್ಕಿ ಉತ್ಸವ, 11:30ಕ್ಕೆ ಹೋ ಹಾರಿಸುವ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳುವದು.
ಆದ ಕಾರಣ ಎಲ್ಲ ಸದ್ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಸದ್ಗುರು ವಾಸಕರ ಮಹಾರಾಜರು ಹಾಗೂ ಶ್ರೀ ಜಗದ್ಗುರು ತುಕಾರಾಮ ಮಹಾರಾಜರ ಕೃಪೆಗೆ ಪಾತ್ರರಾಗಬೇಕೆಂದು ಗೋಕಾಕ ಫಾಲ್ಸ್ ದ ಸಮಸ್ತ ಗ್ರಾಮಸ್ಥರು, ಸದ್ಭಕ್ತ ಮಂಡಳಿ ಹಾಗೂ ಮರಾಠಾ ಸಮಾಜ ಬಾಂಧವರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Related posts: