RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ನಗರಸಭೆಯ 2022-23ನೇ ಸಾಲಿನ ಬಜೆಟ್ ಮಂಡನೆ

ಗೋಕಾಕ:ನಗರಸಭೆಯ 2022-23ನೇ ಸಾಲಿನ ಬಜೆಟ್ ಮಂಡನೆ 

ನಗರಸಭೆಯ 2022-23ನೇ ಸಾಲಿನ ಬಜೆಟ್ ಮಂಡನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 16 :

 
ನಗರಸಭೆಯ 2021-22ನೇ ಸಾಲಿನ ಪರಿಷ್ಕೃತ ಆಯವ್ಯಯ ಮತ್ತು 2022-23ನೇ ಸಾಲಿನ ರೂ 5.33 ಲಕ್ಷಗಳ ಉಳಿತಾಯದ ಆಯವ್ಯಯವನ್ನು ಪೌರಾಯುಕ್ತ ಶಿವಾನಂದ ಹಿರೇಮಠ ಅವರು ಮಂಡಿಸಿದರು.

ಬುಧವಾದಂದು ನಗರಸಭೆಯ ಸಭಾಂಗಣದಲ್ಲಿ ನಗರಾಧ್ಯಕ್ಷ ಜಯಾನಂದ ಹುಣಚ್ಯಾಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಜೆಟ್ ಮಂಡಿಸಲಾಯಿತು.

ಲೆಕ್ಕ ಅಧಿಕ್ಷಕರಾದ ಎಂ.ಎನ್.ಸಾಗರೇಕರ ಅವರು ಆಯವ್ಯಯವನ್ನು ವಿವರಿಸುತ್ತಾ ಒಟ್ಟು ರೂ 32.71 ಕೋಟಿಗಳ ಆಯ ಹಾಗೂ ರೂ 32.65 ಕೋಟಿ ವ್ಯಯ ಉಳ್ಳದಾಗಿದೆ. ಈಗಾಗಲೇ ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ರೂ 14 ಕೋಟಿ ಖರ್ಚು ಮಾಡಲಾಗಿದ್ದು, ಬಾಕಿ ರೂ 11 ಕೋಟಿ ರೂಗಳ ಕಾಮಗಾರಿಗಳನ್ನು ಬರುವ ಆರ್ಥಿಕ ವರ್ಷದಲ್ಲಿ ಪೂರ್ಣಗೋಳಿಸಲಾಗುವದು. ರೂ 3 ಕೋಟಿ ಅನುದಾನದಲ್ಲಿ ವಾಣಿಜ್ಯ ಮಳಿಗೆಗಳ ಕಾಮಗಾರಿ ಹಾಗೂ 15ನೇ ಹಣಕಾಸು ಯೋಜನೆ ಒಳಗೊಂಡಂತೆ ರಸ್ತೆ, ಚರಂಡಿ ಬೀದಿ ದೀಪ, ಉದ್ಯಾನವನ, ನೀರು ಸರಬರಾಜು, ಒಳಚರಂಡಿ ಇತ್ಯಾದಿ ಕಾಮಗಾರಿಗಳನ್ನು ಮಾಡಲಾಗುವದು. ಶೇಕಡಾ 24.10 , 7.25 ಮತ್ತು 5ದರ ವಿಭಾಗಗಳಲ್ಲಿ ಅಂದಾಜು ರೂ 15 ಲಕ್ಷ ಖರ್ಚುಗಳನ್ನು ಮಾಡಲಾಗುವುದು.

ನಗರ ಸ್ವಚ್ಛತೆಗಾಗಿ ಹೆಚ್ಚಿನ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲು ರೂ 4.84 ಕೋಟಿ ಅವಶ್ಯ ವಿರುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವ್ಹಿ.ಎಂ ಸಾಲಿಮಠ , ಎಂ ಎಚ್ . ಗಜಾಕೋಶ ಸೇರಿದಂತೆ ಇತರ ಸದಸ್ಯರು ಇದ್ದರು.

Related posts: