RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಸುಸಂಸ್ಕೃತ ವ್ಯಕ್ತಿಗಳಾಗಲು ಶಿಕ್ಷಣ ಅತಿ ಅವಶ್ಯಕ : ಶಿಕ್ಷಕ ಆರ್.ಎಲ್.ಮಿರ್ಜಿ ಅಭಿಮತ

ಗೋಕಾಕ:ಸುಸಂಸ್ಕೃತ ವ್ಯಕ್ತಿಗಳಾಗಲು ಶಿಕ್ಷಣ ಅತಿ ಅವಶ್ಯಕ : ಶಿಕ್ಷಕ ಆರ್.ಎಲ್.ಮಿರ್ಜಿ ಅಭಿಮತ 

ಸುಸಂಸ್ಕೃತ ವ್ಯಕ್ತಿಗಳಾಗಲು ಶಿಕ್ಷಣ ಅತಿ ಅವಶ್ಯಕ : ಶಿಕ್ಷಕ ಆರ್.ಎಲ್.ಮಿರ್ಜಿ ಅಭಿಮತ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 17 :

 
ಸುಸಂಸ್ಕೃತ ವ್ಯಕ್ತಿಗಳಾಗಲು ಶಿಕ್ಷಣ ಅತಿ ಅವಶ್ಯಕವಾಗಿದ್ದು, ತಾವೆಲ್ಲ ಶಿಕ್ಷಣ ಪಡೆದು ಉತ್ತಮ ನಾಗರಿಕರಾಗಿರಿ ಎಂದು ಜಿಪಿಯುಸಿ ಫ್ರೌಢಶಾಲೆಯ ಶಿಕ್ಷಕ ಆರ್.ಎಲ್.ಮಿರ್ಚಿ ಹೇಳಿದರು.

ಗುರುವಾರದಂದು ನಗರದ ಶೂನ್ಯ ಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಕನ್ನಡ ಮಾಧ್ಯಮ ಫ್ರೌಢಶಾಲೆಯ ಎಸ್.ಎಸ್.ಎಲ್‌.ಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳ ಜೊತೆಗೆ ಜ್ಞಾನಮಟ್ಟವನ್ನು ಹೆಚ್ಚಿಸುವಂತಾ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಕಠಿಣ ಪರಿಶ್ರಮದಿಂದ ಸಾಧಕರಾದ ಮಹಾನ ವ್ಯಕ್ತಿಗಳ ಪ್ರೇರಣೆಯಿಂದ ತಾವು ಸಾಧಕರಾಗಿರಿ, ಸಾಧನೆಗೆ ಬಡತನ ಅಡ್ಡಿಯಾಗುವದಿಲ್ಲ. ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದಲ್ಲಿ ಆಸಕ್ತಿ ಇರುವ ಕ್ಷೇತ್ರದ ಆಯ್ಕೆಯೊಂದಿಗೆ ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಿ ದೇಶಾಭಿಮಾನಿಗಳನ್ನಾಗಿ ದೇಶಕ್ಕೆ ಕೊಡುಗೆ ನೀಡುವಂತೆ ಹಾರೈಸಿದರು.

ವೇದಿಕೆಯ ಮೇಲೆ ಆಡಳಿತಾಧಿಕಾರಿ ಅಡಿವೇಶ ಗವಿಮಠ, ನಿರ್ದೇಶಕ ಭೀಮಶಿ ಹಡಗಿನಾಳ, ಮುಖ್ಯೋಪಾಧ್ಯಾಯನಿ ದ್ರಾಕ್ಷಿಯನಿ ಮಠಪತಿ , ವಿದ್ಯಾರ್ಥಿ ಪ್ರತಿನಿಧಿಗಳಾದ ಸ್ವಪ್ನಾ ಸೀತಾರೆ, ಅರುಣ ಪಾಟೀಲ ಇದ್ದರು.

Related posts: