RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ದಿ.22 ರಿಂದ 26ರ ವರೆಗೆ ಕುಂದರಗಿಯ ತಪೋಕ್ಷೇತ್ರ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ

ಗೋಕಾಕ:ದಿ.22 ರಿಂದ 26ರ ವರೆಗೆ ಕುಂದರಗಿಯ ತಪೋಕ್ಷೇತ್ರ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ 

ದಿ.22 ರಿಂದ 26ರ ವರೆಗೆ ಕುಂದರಗಿಯ ತಪೋಕ್ಷೇತ್ರ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 17 :

 

ಕುಂದರನಾಡಿನ ತಪೋಕ್ಷೇತ್ರ ಶ್ರೀ ಅಡವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವವು ಇದೇ ದಿ.22 ರಿಂದ 26ರ ವರೆಗೆ ಜರುಗಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಜಿ ಹೇಳಿದರು.
ಅವರು, ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿ, ಕಳೆದೆ ಮೂರು ವರ್ಷಗಳಲ್ಲಿ ಮಾರ್ಕಂಡೇಯ ನದಿ ಪ್ರವಾಹ ಹಾಗೂ ಕೋವಿಡ್ ಸಾಂಕ್ರಾಮಿಕ ಹರಡುತ್ತಿರುವ ಹಿನ್ನಲೆಯಲ್ಲಿ ಅಂಬಲಿಯೊಡೆಯ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿಲ್ಲ ಹೀಗಾಗಿ ಇದೆ ಮಾರ್ಚ22, 23, 24, 25 ಮತ್ತು 26 ರಂದು ಅತಿವಿಜೃಂಭನೆಯಿಂದ ಜರುಗಲಿದೆ ಎಂದರು.
ದಿ.22 ಮಂಗಳವಾರರಂದು ಪ್ರಾತಃಕಾಲ 5ಗಂಟೆಗೆ ಶ್ರೀ ಅಡವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ತೆಂಗಿನಕಾಯಿ ಅಲಂಕಾರ, ಮುಂಜಾನೆ 9.30ಕ್ಕೆ ಷಟಸ್ಥಲ ಧ್ವಜಾರೋಹಣ, 10.30ಕ್ಕೆ ಜಾನುವಾರುಗಳ ಜಾತ್ರೆ ಉದ್ಘಾಟನೆ, ಮಧ್ಯಾಹ್ನ 12ಕ್ಕೆ ಕಲಾಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಸಂಜೆ 7.30ಕ್ಕೆ ಕುಂದರನಾಡ ಉತ್ಸವ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಕುಂದರನಾಡ ಉತ್ಸವ ಕಾರ್ಯಕ್ರಮದ ಉದ್ಘಾಟನೆ ಹಾಗೂ ಭಾವೈಕ್ಯ ಸಮ್ಮೇಳನದ ದಿವ್ಯ ಸಾನಿಧ್ಯವನ್ನು ಸಾವಳಗಿಯ ಜಗದ್ಗುರು ಶ್ರೀ ಶಿವಲಿಂಗೇಶ್ವರ ಮಹಾಸ್ವಾಮಿಜಿ ವಹಿಸುವರು. ಉದ್ಘಾಟನೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ನೆರವೆರಿಸುವರು. ಪಾಶ್ಚಾಪೂರದ ಶ್ರೀ ಮೌಲಾನಾ ಅಲ್ಲಮಖಾನ ದೇಸಾಯಿ ಸೇಂಟ್ ಥೆರೆಸಾ ಶಾಲೆಯ ಸಿಸ್ಟರ್ ಫಾತಿಮಾ ಡೆವಿಡ್‍ರವರು ವಿಶೇಷ ಅಹ್ವಾನಿತರಾಗಿ ಆಗಮಿಸುವರು.
ದಿ.23 ಬುಧವಾರರಂದು ಪ್ರಾತಃಕಾಲ 5ಗಂಟೆಗೆ ಶ್ರೀ ಅಡವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ತರಕಾರಿ ಅಲಂಕಾರ, ಬೆಳಿಗ್ಗೆ 6.30ಕ್ಕೆ ವಟುಗಳಿಗೆ ಅಯ್ಯಾಚಾರ, ಮಧ್ಯಾಹ್ನ 2.30ಕ್ಕೆ ಜಂಗು ಕುಸ್ತಿ, ಸಂಜೆ 7.30ಕ್ಕೆ ಮಹಿಳಾ ಸಮಾವೇಶ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ರಾತ್ರಿ 10ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ಕನ್ನಡಕೊಗಿಲೆ ಖ್ಯಾತಿಯ ಕು.ಮಹಾನ್ಯ ಗುರು ಪಾಟೀಲ ಹಾಗೂ ಕು.ಓಂಕಾರ ಪತ್ತಾರ ನಡೆಸಿಕೊಡಲಿದ್ದಾರೆ. ಮಹಿಳಾ ಸಮಾವೇಶ ಹಾಗೂ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ, ಗುಬ್ಬಲಗುಡ್ಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಜಿ ವಹಿಸುವರು. ಅಧ್ಯಕ್ಷತೆಯನ್ನು ರುದ್ರಾಕಷಿಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ವಹಿಸುವರು. ಮುಖ್ಯತಿಥಿಗಳಾಗಿ ಶಾಸಕ ಸತೀಶ ಜಾರಕಿಹೊಳಿ, ಸಂಸದೆ ಮಂಗಲಾ ಅಂಗಡಿ, ಮುಖಂಡರುಗಳಾದ ಮಹಾಂತೇಶ ಕವಟಗಿಮಠ, ಎ ಬಿ ಪಾಟೀಲ, ಶಶಿಕಾಂತ ನಾಯ್ಕ ಆಗಮಿಸುವರು.
ದಿ.24 ಗುರುವಾರರಂದು ಪ್ರಾತಃಕಾಲ 5ಗಂಟೆಗೆ ಶ್ರೀ ಅಡವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ಹಣ್ಣಿನ ಅಲಂಕಾರ, ಬೆಳಿಗ್ಗÉ 1.30ಕ್ಕೆ ಜಾನುವರುಗಳ ಆಯ್ಕೆ, ಮಧ್ಯಾಹ್ನ ಜಂಗಿ ಕುಸ್ತಿ, ಸಂಜೆ 7.0ಕ್ಕೆ ಕುಂದರನಾಡೋತ್ಸವ ಪ್ರಶಸ್ತಿ ಪ್ರಧಾನ ಹಾಗೂ ನಗೆ ಹಬ್ಬ ಸಂಸ್ಕøತಿಕ ಕಾರ್ಯಕ್ರಮ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಮಹಾಂತ ದುರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು, ಮುಖ್ಯಅತಿಥಿಗಳಾಗಿ ಶಾಸಕ ರಮೇಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ವಿಧಾನ ಪರಿಷತ ಸದಸ್ಯ ಲಖನ ಜಾರಕಿಹೊಳಿ, ಅತಿಥಿಗಳಾಗಿ ಜಿಲ್ಲಾಧಿಕಾರಿ ಎಮ್ ಜಿ ಹಿರೇಮಠ, ಶಾಸಕ ಮಹಾಂತೇಶ ಕೌಜಲಗಿ ಆಗಮಿಸುವರು. 2019ರ ಕುಂದರನಾಡೋತ್ಸವ ಪ್ರಶಸ್ತಿಯನ್ನು 2019- ದಿ.ಡಾ.ಸಂತೋಷ ಮುತ್ನಾಳ, 2020-ಸಮಾಜ ಸೇವಕಿ ಕುಮಾರಿ ಅನು ಅಕ್ಕ, 2021-ಸಮಾಜ ಸೇವಕ ವಿರೇಶ ಹಿರೇಮಠ, 2022-ಸಮಾಜ ಸೇವಕಿ ಕುಮಾರಿ ಜನನಿ ವತ್ಸಲಾ ಅವರಿಗೆ ನೀಡಲಾಗುವದು.
ದಿ.25 ಶುಕ್ರವಾರರಂದು ಪ್ರಾತಃಕಾಲ 5ಗಂಟೆಗೆ ಶ್ರೀ ಅಡವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ಹೂವಿನÀ ಅಲಂಕಾರ, ಮಧ್ಯಾಹ್ನ 12.30ಕ್ಕೆ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ, ಸಂಜೆ 4.30ಕ್ಕೆ ಅಂಬಲಿಯೊಡೆಯ ಶ್ರೀ ಅಡವಿಸಿದ್ಧೇಶ್ವರರ ಭವ್ಯ ರಥೋತ್ಸವ, ರಾತ್ರಿ 7.30ಕ್ಕೆ ಶ್ರೀ ಅಡವಿಸಿದ್ದೇಶ್ವರರ ಉತ್ಸವ ಮೂರ್ತಿಗೆ ಸಂಗೀತ ಮಹಾಪೂಜೆ, ರಾತ್ರಿ 8.30ಕ್ಕೆ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಡಾ.ಪುನಿತ ರಾಜಕುಮಾರ ಅವರಿಗೆ ಪುಷ್ಪನಮನ ರಾತ್ರಿ 1.30ಕ್ಕೆ ಶ್ರೀಮಠದ ಕಲಾ ಬಳಗದಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿವೆ.
ದಿ.26 ಶನಿವಾರರಂದು ಪ್ರಾತಃಕಾಲ 5ಗಂಟೆಗೆ ಶ್ರೀ ಅಡವಿಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ಬೆಣ್ಣೆ ಅಲಂಕಾರ, ಮಧ್ಯಾಹ್ನ 12.30ಕ್ಕೆ ಜೋಡೆತ್ತಿನ ಶರ್ತು, ಸಂಜೆ 4.30ಕ್ಕೆ ಮಾರ್ಕಂಡೇಯ ನದಿಯಲ್ಲಿ ಶ್ರೀ ಅಡವಿಸಿದ್ದೇಶ್ವರರ ತೆಪ್ಪೋತ್ಸವ ಜರುಗಲಿದ್ದು, ಅಡವಿಸಿದ್ದೇಶ್ವರ ಭಕ್ತವೃಂಧ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಹಾಗೂ ಕುಂದರನಾಡೋತ್ಸವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ರಾಮಣ್ಣ ಸುಂಬಳಿ, ಶಂಕರ ಗೌರಿ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ರಾಜು ಪೂಜೇರಿ, ಮಹೇಂದ್ರ ಪತ್ತಾರ, ಶಿವಾನಂದ ತೊಟಿಗೇರ, ಯಲ್ಲಪ್ಪ ಪೂಜೇರಿ, ನಾಗಪ್ಪ ತಳವಾರ, ಪರಸಪ್ಪ ದಾಸಗೋಳ, ಶೆಟ್ಟೆಪ್ಪ ಎಲಿಬಳ್ಳಿ, ದುಂಡಪ್ಪ ತಳವಾರ ಸೇರಿದಂತೆ ಕುಂದರಗಿ ಗ್ರಾಪಂ ಸದಸ್ಯರು ಇದ್ದರು.

Related posts: