ಘಟಪ್ರಭಾ:ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ : ಡಾ|| ಚಂದ್ರಶೇಖರ
ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ : ಡಾ|| ಚಂದ್ರಶೇಖರ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 24 :
ಮನುಷ್ಯನು ಜೀವನದಲ್ಲಿ ಏನು ಸಾಧಿಸುತ್ತಾನೆ ಎಂಬುದು ಅವನ ವಿದ್ಯಾಬ್ಯಾಸಕ್ಕೆ ಮೇಲೆ ಅವಲಂಭನೆಯಾಗಿರುತ್ತದೆ ಎಂದು ಬೆಳಗಾವಿ ಆರ್.ಪಿ.ಡಿ ಕಾಲೇಜಿನ ಇತಿಹಾಸ ವಿಬಾಗದ ಎಚ್.ಓ.ಡಿ. ಡಾ|| ಚಂದ್ರಶೇಖರ ಎಮ್ ಮುನ್ನೋಳ್ಳಿ ಹೇಳಿದರು
ಅವರು ಗುರುವಾದಂದು ಇಲ್ಲಿನ ಶ್ರೀ ದುರದುಂಡೇಶ್ವರ ಮಠ ಟ್ರಸ್ಟ್ ಪದವಿ ಪೂರ್ವ ಮಹಾ ವಿದ್ಯಾಲಯದ 2021-2022 ನೇ ಶೈಕ್ಷಣಿಕ ವರ್ಷದ ವಾರ್ಷಿಕ ದಿನಾಚರಣೆ ಮತ್ತು ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳ ಬೀಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾಡನಾಡುತ್ತಿದ್ದರು.
ವಿದ್ಯಾರ್ಥಿಯು ಯಾವ ವಿಷಯದಲ್ಲಿ ಹೆಚ್ಚಿಗೆ ಗಮನ ಕೊಡುತ್ತಾನೆ. ಅದನ್ನು ಅರಿತು ಆ ದಿಕ್ಕಿನಲ್ಲಿ ಅವನನ್ನು ಬೆಳೆಸಿದರೆ ಆತನು ಅದರಲ್ಲಿ ಒಳ್ಳೆಯ ಸಾದನೆ ಮಾಡುವದರಲ್ಲಿ ಸಂಶಯವಿಲ್ಲ. ಎಲ್ಲರೂ ಅಯ್.ಎ.ಎಸ್. ಅಧಿಕಾರಿಯಾಗಬೇಕೆಂಬುದರಲ್ಲಿ ಯಾವದೆ ಅರ್ಥವಿಲ್ಲ ಬೇರೆ ಬೇರೆ ವಿಬಾಗದಲ್ಲಿ ಅಬ್ಯಾಸ ಮಾಡಿ ಸಾದನೆ ಮಾಡಬಹುದು. ಎಂದರು.
ಇದೇ ಕಾಲೆಜಿನಲ್ಲಿ ಕಲಿತು ಬೆಂಗಳೂರಿನಲ್ಲಿ ಲೊಕಾಯುಕ್ತ ಸಿಪಿಆಯ್ ಆಗಿರುವ ಸಮೀಪದ ಶಿರಢಾಣ ಗ್ರಾಮದ ಧರೆಗೌಡಾ ಪಾಟೀಲ ಸತ್ಕಾರ ಸ್ವೀಕರಿಸಿ ಮಾತನಾಡಿ ನನಗೆ ಈ ಕಾಲೇಜಿನಲ್ಲಿ ಒಳ್ಳೆಯ ಶಿಕ್ಷಣ ನೀಡಿದರು ತಾವು ನನ್ನಂತೆ ಆಗಬೇಕೆಂಬುದು ನನ್ನ ಆಸೆ. ಏಕಾಗ್ರತೆಯಿಂದ ಓದಿದರೆ ಎನು ಬೇಕಾದರೂ ಸಾದಿಸಬಹುದು ಎಂದರು.
ಉಪನ್ಯಾಸಕರಾದÀ ವಿ.ಕೆ. ನಾಯಿಕ ಅತಿಥಿಗಳ ಪರಿಚಯ ಮತ್ತು ಸ್ವಾಗತ ಮಾಡಿದರು. ಪ್ರಾಚಾರ್ಯ ಶ್ರೀಮತಿ ಎಸ್.ಎಮ್. ನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೆ ಸಂದರ್ಭದಲ್ಲಿ ಶ್ರೀಮತಿ ಜೆ.ಆರ್. ಗುಜನಟ್ಟಿ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಯು. ಎ. ದರೆಪ್ಪಗೋಳ ವಂದಿಸಿದರು.
ವೇದಿಕೆಯ ಮೇಲೆ ಕಾರ್ಯಕ್ರಮದ ಅಧ್ಯಕ್ಷರಾಗಿ ಕಾಲೇಜು ಸಮೀತಿ ಅಧ್ಯಕ್ಷರಾದ ಅಪ್ಪಯ್ಯಾ ಬಡಕುಂದ್ರಿ, ಕಮತ ಸರ್, ಎಸ್.ಎಚ್. ಗಿರೆಡ್ಡಿ,ಆರ್.ಎಲ್ ತಡ್ಡಿ,ಜಿ.ಎಸ್.ರಜಪೂತ,ಹುದ್ದಾರ ಗುರುಗಳು ಸೇರದಂತೆ ಅನೇಕರು ಇದ್ದರು.