RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ : ಮುರುಘರಾಜೇಂದ್ರ ಶ್ರೀ

ಗೋಕಾಕ:ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ : ಮುರುಘರಾಜೇಂದ್ರ ಶ್ರೀ 

ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ : ಮುರುಘರಾಜೇಂದ್ರ ಶ್ರೀ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 25 :

 
ದೇಶ ಸುಂದರವಾಗಿ ಕಾಣಲು ಕಾರ್ಮಿಕರ ಪರಿಶ್ರಮ ಮುಖ್ಯವಾಗಿದೆ ಎಂದು ಇಲ್ಲಿನ ಶೂನ್ಯ ಸಂಪಾದನಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರದಂದು ನಗರದ ಸಮುದಾಯ ಭವನದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಸಮೃದ್ಧಿ ಕಟ್ಟಡ ಕಾರ್ಮಿಕರ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಗೋಕಾಕ ಹಾಗೂ ಕಾರ್ಮಿಕ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಮತ್ತು ಅಸಂಘಟಿತ ವಲಯ ಕಾರ್ಮಿಕರಿಗೆ ಇಲಾಖೆಯ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.

ಕಾರ್ಮಿಕರು ಸಾಕಷ್ಟು ಕಟ್ಟಡಗಳನ್ನು ಕಟ್ಟಿದರು ಸಹ ಇನ್ನುವರೆಗೂ ಅವರ ಸ್ವಂತ ಮನೆಗಳು ಇರದಿರುವದು ನಮ್ಮ ರಾಜ್ಯದ ದುರ್ಧೈವವಾಗಿದೆ. ನಮ್ಮ ಸರಕಾರ ಹಾಗೂ ರಾಜಕಾರಣಿಗಳು ಮನಸ್ಸು ಮಾಡಿ ಕಾರ್ಮಿಕರಿಗೆ ಸ್ವಂತ ಮನೆಗಳನ್ನು ನಿರ್ಮಾಣ ಮಾಡಿ ಕೊಡಲು ಮುಂದಾಗಬೇಕು ಎಂದರು.
ಕಟ್ಟಡ ಹಾಗೂ ಇತರೆ ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಿ ಮಾಡುವದರ ಜೊತೆ ಸರಕಾರ ಕಾಲಕಾಲಕ್ಕೆ ಒದಗಿಸುವ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಅವರ ಭವಿಷ್ಯವನ್ನು ಸುಂದರಗೊಳಿಕೊಳ್ಳಬೇಕು ಎಂದು ಹೇಳಿದರು.
ಕಾರ್ಮಿಕ ನಿರೀಕ್ಷಕ ಪಾಂಡುರಂಗ ಮಾವರಕರ ಮಾತನಾಡಿ
ಕಾರ್ಮಿಕ ಇಲಾಖೆ ಸಾಕಷ್ಟು ಯೋಜನೆಗಳನ್ನು ತಂದಿದ್ದು , ಅದರ ಸದುಪಯೋಗ ಪಡೆದುಕೊಂಡು ಕಾರ್ಮಿಕರು ತಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ಕಾರ್ಮಿಕ ಪ್ರಮುಖ ವಿಠಲ ಮದಿಹಳ್ಳಿ ಸ್ವಾಗತಿಸಿದರು, ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಿಸಿ, ವಂದಿಸಿದರು.

ವೇದಿಕೆಯಲ್ಲಿ ನರಗಸಭೆ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷ ಬಸವರಾಜ ಆರೆನ್ನವರ, ಭೀರಪ್ಪ ಕಮತೆರ, ಗಿರೀಶ ಕನಣಾಂ,ಶಿವಾಜಿ ಜಾಧವ ಉಪಸ್ಥಿತರಿದ್ದರು.

Related posts: