RNI NO. KARKAN/2006/27779|Friday, November 22, 2024
You are here: Home » breaking news » ಮೂಡಲಗಿ:ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ

ಮೂಡಲಗಿ:ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ 

ಮೂಡಲಗಿ ತಾಲೂಕುಗಾಗಿ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಆಗ್ರಹ : ಕಂದಾಯ ಕಾರ್ಯದರ್ಶಿ ಸುಭಾಷಚಂದ್ರಗೆ ಬೇಟ್ಟಿ

ಮೂಡಲಗಿ ಸೆ 26 : ತಾಲೂಕಾ ಕೇಂದ್ರದಿಂದ ವಂಚಿತಗೊಂಡಿರುವ ಮೂಡಲಗಿ ಪಟ್ಟಣವನ್ನು ತಾಲೂಕಾ ಕೇಂದ್ರವನ್ನಾಗಿಸಲು ಕೂಡಲೇ ಸಂಪುಟ ಸಭೆಗೆ ಪ್ರಸ್ತಾವನೆಯನ್ನು ಸಲ್ಲಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದು ಬೆಂಗಳೂರಿನಲ್ಲಿ ಪ್ರಭಾರಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗೃಹ ಇಲಾಖೆ ಕಾರ್ಯದರ್ಶಿ ಸುಭಾಷಚಂದ್ರ ಅವರನ್ನು ಭೇಟಿ ಮಾಡಿ ಚರ್ಚಿಸಿದರು.

ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಸುಭಾಷಚಂದ್ರ ಅವರ ಕೊಠಡಿಗೆ ತೆರಳಿ ಮೂಡಲಗಿ ತಾಲೂಕು ರಚನೆಯ ಪ್ರಸ್ತಾವನೆ ಕುರಿತಂತೆ ಸುಮಾರು ಅರ್ಧ ಗಂಟೆ ಕಾಲ ಚರ್ಚಿಸಿದರು.

ಒಂದು ವಾರದೊಳಗೆ ಮೂಡಲಗಿ ತಾಲೂಕು ರಚನೆಯ ಪ್ರಸ್ತಾವನೆಯನ್ನು ಸಂಪುಟ ಸಭೆಗೆ ಸಲ್ಲಿಸುವಂತೆ ಕೋರಿದ ಅವರು, ಆದಷ್ಟು ಬೇಗ ಮೂಡಲಗಿ ತಾಲೂಕು ರಚನೆಗೆ ಅಗತ್ಯ ಕ್ರಮಗಳನ್ನು ಇಲಾಖೆಯಿಂದ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು.
ಮೂಡಲಗಿ ಹೊಸ ತಾಲೂಕಿಗೆ ಮೂಡಲಗಿ ಪುರಸಭೆ ಸೇರಿ 2 ಪಟ್ಟಣ ಪಂಚಾಯತ, 21 ಗ್ರಾಮ ಪಂಚಾಯತಗಳು ಸೇರಿ ಒಟ್ಟು 50 ಗ್ರಾಮಗಳನ್ನೊಳಗೊಂಡ ಹೊಸ ಪ್ರಸ್ತಾವನೆ ಬಗ್ಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ಸುಭಾಷಚಂದ್ರ ಅವರೊಂದಿಗೆ ಚರ್ಚಿಸಿದರು.
ಹೇಗಾದರೂ ಮಾಡಿ ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಮಾರ್ಪಡಿಸಲು ಕಳೆದ ದಿ. 21 ರಿಂದ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪಕ್ಷದ ಕಾರ್ಯಕ್ರಮಗಳಲ್ಲಿಯೂ ಸಹ ಪಾಲ್ಗೊಳ್ಳದೇ ತಾಲೂಕು ರಚನೆಯ ಕಾರ್ಯದಲ್ಲಿ ತೊಡಗಿದ್ದಾರೆ. ಮೂಡಲಗಿಯನ್ನು ಹೊಸ ತಾಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಿಸುವವರೆಗೂ ಬೆಂಗಳೂರಿನ ಪ್ರವಾಸ ಮುಂದುವರೆಸಲಿದ್ದಾರೆ.

ಮಂಗಳವಾರದಂದು ಬೆಂಗಳೂರಿನಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ಲಭ್ಯವಿಲ್ಲದ್ದರಿಂದ ನಾಳೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂದಾಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.

Related posts: