ಗೋಕಾಕ:ಸಮಾಜ ಸೇವೆಯಿಂದ ಪುಣ್ಯ ಪ್ರಾಪ್ತಿ ಯಾಗುತ್ತದೆ : ದೀಪಿಕಾ ಬಿದರಿ
ಸಮಾಜ ಸೇವೆಯಿಂದ ಪುಣ್ಯ ಪ್ರಾಪ್ತಿ ಯಾಗುತ್ತದೆ : ದೀಪಿಕಾ ಬಿದರಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 28 :
ಸಮಾಜ ಸೇವೆಯಿಂದ ಪುಣ್ಯ ಪ್ರಾಪ್ತಿ ಯಾಗುತ್ತಿದ್ದು, ಸಮಾಜ ಸೇವೆಗೆ ಎಲ್ಲರೂ ಮುಂದಾಗುವಂತೆ ಜೆಸಿಐ ವಲಯ ಅಧ್ಯಕ್ಷೆ ದೀಪಿಕಾ ಬಿದರಿ ಹೇಳಿದರು.
ರವಿವಾರದಂದು ನಗರದಲ್ಲಿ ಜೆಸಿಐ ಗೋಕಾಕ ಕರದಂಟು ಸಿಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವ್ಯಕ್ತಿ ಬದಲಾದಾಗ ವ್ಯಕ್ತಿತ್ವ ಬದಲಾಗಿ ಸಮಾಜ ಬದಲಾಗುತ್ತದೆ. ಈ ತತ್ವದಡಿ ಜೆಸಿಐ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. ವಲಯದ ನಡಿಗೆ ಯುವಕರ ಕಡೆಗೆ ಎಂಬ ಧ್ಯೇಯದಡಿ ಯುವರಕಲ್ಲಿ ನಾಯಕತ್ವ ಗುಣಗಳನ್ನು ಬೆಳೆಸಿ ಅವರನ್ನು ಸಮರ್ಥ ಪ್ರಜೆಗಳನ್ನಾಗಿಸಲು ಹಲವಾರು ಶಿಬಿರಗಳ ಮೂಲಕ ಕಾರ್ಯಪ್ರವೃತ್ತವಾಗಿದೆ. ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಿದರೆ ಅವರು ಸಾಧಕರಾಗಿ ಹೊರಹೊಮ್ಮುತ್ತಾರೆ ಎಂದು ಹೇಳಿದರು.
ನೂತನ ಅಧ್ಯಕ್ಷರಾಗಿ ಅಮೃತ ಕಡ್ಡು, ಕಾರ್ಯದರ್ಶಿಯಾಗಿ ಅಕ್ಷಯ ಚಿಂಚಲಿ, ಮಹಿಳಾ ಘಟಕದ ಅಧ್ಯಕ್ಷರಾಗಿ ರೇಷ್ಮಾ ಕಡ್ಡು, ಜೂನಿಯರ್ ಜೆಸಿ ಆಗಿ ರಿಷೀಕೇಶ ಸೇರಿದಂತೆ ಇತರ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.
ವೇದಿಕೆ ಮೇಲೆ ಅತಿಥಿಗಳಾದ ಲಕ್ಷ್ಮೀ ಎಜುಕೇಶನ್ ಟ್ರಸ್ಟ್ ನ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಹಾಂತೇಶ ತಾವಂಶಿ, ಜೆಸಿಐ ವಲಯ ಉಪಾಧ್ಯಕ್ಷ ಪ್ರವೀಣ್ ದೇಶಪಾಂಡೆ, ಸವಿತಾ ರಮೇಶ ಹಾಗೂ ಹಿಂದಿನ ಪದಾಧಿಕಾರಿಗಳಾದ ಮಹಾವೀರ ಖಾರೇಪಠಾಣ, ರಾಮಚಂದ್ರ ಕಾಕಡೆ, ಮಂಜುಳಾ ಚಿಕ್ಕಡೋಳಿ, ಧನ್ಯಕುಮಾರ ಕಿತ್ತೂರ ಇದ್ದರು.