ಗೋಕಾಕ:ವಿದ್ಯಾರ್ಥಿಗಳ ಸಾಧನೆಯಿಂದ ರಾಜ್ಯದ ಜನತೆ ಗೋಕಾವಿ ನಾಡಿನತ್ತ ನೋಡುವಂತಾಗಿದೆ : ಬಿಇಒ ಜಿ.ಬಿ.ಬಳಗಾರ
ವಿದ್ಯಾರ್ಥಿಗಳ ಸಾಧನೆಯಿಂದ ರಾಜ್ಯದ ಜನತೆ ಗೋಕಾವಿ ನಾಡಿನತ್ತ ನೋಡುವಂತಾಗಿದೆ : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 1 :
ವಿದ್ಯಾರ್ಥಿಗಳ ಅಮೋಘ ಸಾಧನೆಯಿಂದ ರಾಜ್ಯದ ಜನತೆ ಗೋಕಾವಿ ನಾಡಿನತ್ತ ನೋಡುವಂತಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಶುಕ್ರವಾರದಂದು ನಗರದ ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಇಲ್ಲಿನ ಗುರುವಾರ ಪೇಠೆಯ ಸಮಸ್ತ ನಾಗರಿಕರು ಆಯೋಜಿಸಿದ್ದ ಶೂನ್ಯ ಸಂಪಾದನ ಮಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ತಳ್ಳಿ ಇವರು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ನಿಮಿತ್ತ ಅವರ ಸತ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಇವುಗಳ ಸದುಪಯೋಗದಿಂದ ಇನ್ನೂ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಪ್ರತಿಭಾವಂತರರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ತಮ್ಮ ಬದುಕನ್ನು ಉಜ್ವಲಗೊಳಿಸುವದರ ಜೊತೆಗೆ ತಂದೆ ತಾಯಿಗಳ ಕನಸನ್ನು ನನಸಾಗಿಸುವಂತೆ ಹೇಳಿದರು.
ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮನುಷ್ಯನು ಬದುಕಲು ವಿದ್ಯೆ ಅತಿ ಅವಶ್ಯಕವಾಗಿದ್ದು, ಪಾಲಕರು ಶಿಕ್ಷಣಕ್ಕೆ ಮಹತ್ವ ನೀಡಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗುರುವಾರ ಪೇಠೆಯ ನಾಗರಿಕರೊಂದಿಗೆ ಸಂಗೋಳ್ಳಿ ರಾಯಣ್ಣ ಸಂಘ, ಕುಂಬಾರ ಸಮಾಜ, ಚಿತ್ರಗಾರ ಸಮಾಜ ಹಾಗೂ ಬಸಳಗುಂದಿ ಗ್ರಾಮಸ್ಥರು ವಿದ್ಯಾರ್ಥಿನಿಯನ್ನು ಸತ್ಕರಿಸಿದರು.
ವೇದಿಕೆಯ ಮೇಲೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ನಗರಾಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಮೂಡಲಗಿ ಬಿ.ಇ.ಒ ಅಜೀತ ಮನ್ನಿಕೇರಿ, ಪೌರಾಯುಕ್ತ ಶಿವಾನಂದ ಹಿರೇಮಠ, ಪಿಎಸ್ಐ ಕೆ.ವಾಲಿಕರ,ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಎಸ್.ಪಿ.ವರಾಳೆ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ನಿವೃತ್ತ ಶಿಕ್ಷಕ ವಿಠಲ ಹಟ್ಟಿ, ದುಂಡಪ್ಪ ತಳ್ಳಿ, ರಾಮಣ್ಣ ತಳ್ಳಿ ಇದ್ದರು.
ರಾಮಚಂದ್ರ ಕಾಕಡೆ ಸ್ವಾಗತಿಸಿದರು, ಲಕ್ಷ್ಮಣ ಮಲ್ಲಾಪೂರೆ ವಂದಿಸಿದರು.