ಗೋಕಾಕ:ವಚನಗಳ ಪಾಲನೆಯಿಂದ ನೆಮ್ಮದಿಯ ಜೀವನ ಸಾಧ್ಯ : ಮುರುಘರಾಜೇಂದ್ರ ಶ್ರೀ
ವಚನಗಳ ಪಾಲನೆಯಿಂದ ನೆಮ್ಮದಿಯ ಜೀವನ ಸಾಧ್ಯ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 6 :
ವಚನಗಳ ಪಾಲನೆಯಿಂದ ಬದುಕು ಬದಲಾಗಿ ನೆಮ್ಮದಿಯ ಜೀವನ ಸಾಧ್ಯವೆಂದು ಇಲ್ಲಿನ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಬುಧವಾರದಂದು ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ತಾಲೂಕಾಡಳಿತ , ತಾಲೂಕು ಪಂಚಾಯತ್ ಹಾಗೂ ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇವರ ದಾಸಿಮಯ್ಯ ಅವರು ಪ್ರಥಮ ವಚನಕಾರರಾಗಿ ವೈಚಾರಿಕ ನೆಲೆಗಟ್ಟಿನಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾರ್ಯವನ್ನು ಮಾಡಿದ್ದರು. ಸಮಾಜ ಭಾಂಧವರು ಅವರ ಆದರ್ಶಗಳು ಹಾಗೂ ಅವರ ವಚನಗಳನ್ನು ಆಚರಣೆಗೆ ತರುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ವೇದಿಕೆಯ ಮೇಲೆ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ, ಉಪ ತಹಸೀಲ್ದಾರ್ ಎಲ್.ಎಚ್.ಭೋವಿ, ನಗರಸಭೆ ಪರಿಸರ ಅಭಿಯಂತರ ಎಂ ಎಚ್.ಗಜಾಕೋಶ, ಪಿಎಸ್ಐ ಕೆ.ವಾಲಿಕರ, ಉಪನ್ಯಾಸಕ ಬಾಹುಸಾಹೇಬ ಬಾನೆ , ಮುಖಂಡರಾದ ಬಸವರಾಜ ಗೌಡರ, ಶಂಕರ ಗೋಕಾವಿ ಇದ್ದರು.