RNI NO. KARKAN/2006/27779|Friday, November 8, 2024
You are here: Home » breaking news » ಘಟಪ್ರಭಾ:ಇಂದಿನಿಂದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ನಿಮಿತ್ಯ ವಿಶೇಷ ಕಾರ್ಯಕ್ರಮಗಳು ಪ್ರಾರಂಭ

ಘಟಪ್ರಭಾ:ಇಂದಿನಿಂದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ನಿಮಿತ್ಯ ವಿಶೇಷ ಕಾರ್ಯಕ್ರಮಗಳು ಪ್ರಾರಂಭ 

ಇಂದಿನಿಂದ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಜಾತ್ರಾ ನಿಮಿತ್ಯ ವಿಶೇಷ ಕಾರ್ಯಕ್ರಮಗಳು ಪ್ರಾರಂಭ

 

ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಏ 8 :

 
ಕಳೆದ ಏ.3 ರಿಂದ ಪ್ರವಚನ ಮೂಲಕ ಪ್ರಾರಂಭವಾದ ಇಲ್ಲಿಯ ಶ್ರೀ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿಗಳಾದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ನೇತೃತ್ವದಲ್ಲಿ ಜರುಗುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಇಂದಿನಿಂದ ಕೊರೋನಾ ವಾರಿಯರ್ಸ್‍ಗಳಿಗೆ ಗೌರವಾಭಿನಂದನೆ ಸಲ್ಲಿಸುವ ವಿಶೇಷ ಕಾರ್ಯಕ್ರಗಳು ಪ್ರಾರಂಭವಾಗಲಿವೆ.
ಕೊರೋನಾ ಒಂದನೇ ಹಾಗೂ ಎರಡನೇ ಅಲೆಯಲ್ಲಿ ತಮ್ಮ ಜೀವÀದ ಹಂಗು ತೊರೆದು ಜನರಿಗೆ ಹಗಲಿರುಳು ಸೇವೆ ಸಲ್ಲಿಸಿದ ಕೊರೋನಾ ವಾರಿಯರ್ಸ್‍ಗಳಿಗೆ ಸತ್ಕರಿಸುವ ಕಾರ್ಯಕ್ರಮಗಳು ಜರುಗಲಿವೆ.
ದಿ.08 ರಂದು ಪುರಸಭೆಯ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರಿಗೆ, ದಿ.09 ರಂದು ಪೊಲೀಸ ಇಲಾಖೆಯವರಿಗೆ, ದಿ.10 ರಂದು ಪತ್ರಕರ್ತರು, ಅಂಬ್ಯುಲೆನ್ಸ್ ಚಾಲಕರು, ಮೆಡಿಕಲ್ ಸ್ಟೋರ್‍ದವರಿಗೆ, ದಿ.11 ರಂದು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ, ದಿ.12 ರಂದು ವೈದ್ಯರು ಮತ್ತು ನರ್ಸಗಳಿಗೆ ಸತ್ಕರಿಸುವ ಮೂಲಕ ಗೌರವಾಭಿನಂದನೆ ಸಲ್ಲಿಸಲಾವುದು.
ದಿ.13 ರಂದು ಅಭಿನಂದನಾ ಸಮಾರಂಭ ಜರುಗಲಿದ್ದು, ದಿ.14 ರಂದು ಶ್ರೀ ಕರ್ತು ಗದ್ದುಗೆಗೆ ಮಹಾರುದ್ರಾಭಿಷೇಕ ನಂತರ ಮಲ್ಲಾಪೂರ ಪಿ.ಜಿ ಲಕ್ಷ್ಮೀ ದೇವಸ್ಥಾನದಿಂದ ಗ್ರಾಮ ದೇವತೆಗಳ ಪಲ್ಲಕ್ಕಿ ಹಾಗೂ ಅಂಬಲಿಕೊಡಗಳ ಮೆರವಣಿಗೆ ವಿಜೃಂಭನೆಯಿಂದ ಮಠಕ್ಕೆ ಆಗಮಿಸುವುದು.
ಸಂಜೆ ಸಾಹಿತ್ಯ ಸಂಗೀತ ನಿರ್ದೇಶಕರಾದ ಡಾ.ಹಂಸಲೇಖ ಹಾಗೂ ಶ್ರೀಮತಿ ಲತಾ ಹಂಸಲೇಖ ಇವರಿಗೆ ಸುಕುಮಾರ ಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ ಶ್ರೀಗಳಿಂದ ಜರುಗಲಿದೆ.
ಮಧ್ಯಾಹ್ನ ಮಲ್ಲಿಕಾರ್ಜುನ ಕಲರಫುಲ್ ಸ್ಪೋಟ್ರ್ಸ ಕ್ಲಬ್ ವತಿಯಿಂದ ತೃತೀಯ ಬಾರಿಗೆ ಅಂತರ ರಾಜ್ಯ ಮಟ್ಟದ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿಗಳನ್ನು ಹಮ್ಮಿಕೊಳ್ಳಲಾಗಿದೆ.
ದಿ.15 ರಂದು ಧುಪದಾಳ ರಸ್ತೆಗೆ ಮಠದ ವತಿಯಿಂದ ನಿರ್ಮಿಸಲಾದ ವಿಜಯ ಮಹಾಂತೇಶ್ವರ ಕಾಂಪ್ಲೇಕ್ಸ್‍ದ ಉದ್ಘಾಟಣೆಯು ಪೂಜ್ಯರ ಹಸ್ತದಿಂದ ಜರುಗಲಿದೆ.
ಸಂಜೆ ಕಲರ್ಸ್ ಕನ್ನಡ ವಾಹಿನಿಯ ಎದೆ ತುಂಬಿ ಹಾಡುವೆನು ಖ್ಯಾತಿಯ ವಾದ್ಯ ಗೊಷ್ಠಿ ಕಲಾವಿದÀರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ಜರಗುವದು. ಪಟ್ಟಣದ ಅನೇಕ ಗಣ್ಯರು ಪ್ರತಿ ದಿನ ಜರಗುವ ಪ್ರವಚವನದ ನಂತರ ಪ್ರಸಾದ ವ್ಯವಸ್ಥೆ ಮಾಡಿದ್ದಾರೆ.

Related posts: