ಬೆಳಗಾವಿ:ಗೋವಾ ಕನ್ನಡಿಗರ ಹಿತ ಕಾಪಾಡಲು ಸರಕಾರ ಬದ್ಧ : ಸಹಕಾರಿ ಸಚಿವ ರಮೇಶ
ಗೋವಾ ಕನ್ನಡಿಗರ ಹಿತ ಕಾಪಾಡಲು ಸರಕಾರ ಬದ್ಧ : ಸಹಕಾರಿ ಸಚಿವ ರಮೇಶ
ಬೆಳಗಾವಿ ಸೆ 27: ಗೌವಾ ಕನ್ನಡಿಗರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿರುವ ಸಚಿವರು ಬಿಜೆಪಿಯ ವಿರುದ್ಧ ಸಿಡಿಮಿಡಿ ಗೋಂಡಿದ್ದಾರೆ
ನಿನ್ನೆ ನಗರದಲ್ಲಿ ಮಾತನಾಡಿದ ಅವರು ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯ ಮಾಧ್ಯಮಗಳಿಂದ ಗೊತ್ತಾಗಿದೆ. ಕರ್ನಾಟಕ ಸರ್ಕಾರ ಗೋವಾ ಕನ್ನಡಿಗರ ಪರವಿದೆ. ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಈ ವಿಚಾರ ಚರ್ಚಿಸುವೆ ಎಂದು ತಿಳಿಸಿದರು.
ಗೋವಾದ ಕನ್ನಡಿಗರ ಹಿತ ಕಾಪಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ರಾಜ್ಯದ ಬಿಜೆಪಿ ನಾಯಕರು ಸಹ ಗೋವಾ ಸರ್ಕಾರದೊಂದಿಗೆ ಮಾತನಾಡಬೇಕು. ಬರೀ ಚುನಾವಣೆ ಇದ್ದಾಗ ಪ್ರಚಾರಕ್ಕೆ ಹೋಗವುದಲ್ಲ ಎಂದು ವಿಜೆಪಿ ನಾಯಕರ ವಿರುದ್ಧ ಹರಿಹಾಯ್ದರು