ಬೆಟಗೇರಿ:ಶ್ರೀರಾಮಚಂದ್ರ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ: ಲಖನ್ ಜಾರಕಿಹೊಳಿ
ಶ್ರೀರಾಮಚಂದ್ರ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ: ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ಏ 11 :
ಪ್ರತಿಯೊಬ್ಬರೂ ಶ್ರೀರಾಮನ ತತ್ವದಾರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಶ್ರೀರಾಮಚಂದ್ರ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಎಲ್ಲರೂ ಸಹೋದರತ್ವ ಭಾವನೆಯಿಂದ ಇರೋಣ ಎಂದು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದರು.
ಬೆಟಗೇರಿ ಗ್ರಾಮದ ಶ್ರೀರಾಮ ವೃತ್ತದಲ್ಲಿ ಮಾ.10ರಂದು ನಡೆದ ನೂತನ ಶ್ರೀರಾಮ ಮೂರ್ತಿಯ ಅನಾವರಣ ಮತ್ತು ಹನುಮಾನ ಮೂರ್ತಿಯ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅರಭಾಂವಿ ಮತ್ತು ಗೋಕಾಕ ಮತಕ್ಷೇತ್ರದ ಎಲ್ಲಾ ಸಮಾಜ ಭಾಂದವರ ಆರ್ಶೀವಾದ ನಮ್ಮ ಜಾರಕಿಹೊಳಿ ಕುಟುಂಬದವರ ಮೇಲೆ ಸದಾ ಇರಲಿ, ತಮ್ಮ ಸಮಸ್ಯೆಗಳಿಗೆ ಯಾವಾಗಲೂ ನಾವು ಸ್ಪಂದಿಸುತ್ತೆವೆ. ಜನರ ಸೇವೆಗೆ ಬದ್ಧರಾಗಿದ್ದೇವೆ ಎಂದರು.
ಕಳೆದ ವಿಧಾನ ಪರಿಷತ್ ಚುನಾವಣಿಯಲ್ಲಿ ನನಗೆ ಅಭೂತಪೂರ್ವ ಜಯಕೊಟ್ಟಿದ್ದಿರಿ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೆನೆ. ಸರ್ಕಾರದ ವಿವಿಧ ಸೌಲಭ್ಯಗಳನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಗೆ ತಲುಪಿಸುವಂತ ಪ್ರಯತ್ನ ಮಾಡುತ್ತೇನೆÉ ಎಂದು ಎಂಎಲ್‍ಸಿ ಲಖನ್ ಜಾರಕಿಹೊಳಿ ಹೇಳಿದರು.
ಯುವ ನಾಯಕ ಸರ್ವತ್ತೋಮ ಜಾರಕಿಹೊಳಿ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಉಡುಪಿ&ಮೆಕ್ಕಳಿಕೆ ರಾಜ್ಯ ರಾಜೇಶ್ವರ ಸಂಸ್ಥಾನ, ಅಖಿಲ ಭಾರತೀಯ ಕ್ಷಾತ್ರ ಧರ್ಮಪೀಠದ ವಿಶ್ವಾಧಿರಾಜ ತೀರ್ಥ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದರು. ಮನ್ನೀಕೇರಿ ವಿಜಯ ಸಿದ್ಧೇಶ್ವರ ಸ್ವಾಮೀಜಿ, ತಪಸಿ ಸುರೇಶ ಮಹಾರಾಜರು, ಡಾ.ರೇಖಾ ಚಿನ್ನಾಕಟ್ಟಿ ಮಾತನಾಡಿದರು. ಮಮದಾಪೂರ ಮೌನಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮಖ, ವೇದಮೂರ್ತಿ ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ನೇತೃತ್ವ ವಹಿಸಿದ್ದರು. ದಿ. ಕರ್ನಾಟಕ ಪ್ರದೇಶ ಹಿಂದೂ ಕ್ಷತ್ರೀಯ ಸಂಘದ ರಾಜ್ಯಾಧ್ಯಕ್ಷ ರಾಮನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಶ್ರೀರಾಮ ಮತ್ತು ಹನುಮಾನ ಮೂರ್ತಿಗೆ ಮಹಾಭಿಷೇಕ, ಮಹಾಪೂಜೆ, ಹೋಮ ನಡೆದ ಬಳಿಕ ಸ್ಥಳೀಯ ಯಲ್ಲಾಲಿಂಗೇಶ್ವರ ಮಠದಿಂದ ಶ್ರೀ ಆಂಜನೇಯ ಮೂರ್ತಿಯ ಮತ್ತು ಕಳಸ, ಕುಂಭ, ಆರತಿ ಸಕಲ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಜರುಗಿತು. ಶ್ರೀಗಳು, ಗಣ್ಯರು, ದಾನಿಗಳನ್ನು ಸಮಾರಂಭ ಆಯೋಜಕ ಸಮಿತಿ ವತಿಯಿಂದ ಸತ್ಕರಿಸಲಾಯಿತು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಕ್ಷತ್ರಿಯ ಸಮಾಜದ ಮುಖಂಡ ದಾಸಪ್ಪ ನಾಯ್ಕ, ಡಾ.ಎಚ್.ಎಫ್.ಯೋಗಪ್ಪನವರ, ಯಲ್ಲಪ್ಪನಾಯ್ಕ ನಾಯ್ಕ, ಭೀಮನಾಯ್ಕ ನಾಯ್ಕ ಬಸವಂತ ಕೋಣಿ, ಲಕ್ಷ್ಮಣ ನೀಲಣ್ಣವರ, ಈಶ್ವರ ಬಳಿಗಾರ, ಸುಭಾಷ ಜಂಭಗಿ, ಮುತ್ತೆಪ್ಪ ವಡೇರ, ಹಣಮಂತ ವಡೇರ, ಶ್ರೀಧರ ದೇಯಣ್ಣವರ, ವೀರನಾಯ್ಕ ನಾಯ್ಕರ,ಬಸವರಾಜ ಪಣದಿ, ಮಲ್ಲಪ್ಪ ಪೇದನ್ನವರ, ಹನುಮಂತ ವಗ್ಗರ, ಕೆಂಪಣ್ಣ ಪೇದನ್ನವರ, ಸಂಜು ಪೂಜೇರ, ಭರಮಪ್ಪ ಪೂಜೇರ, ಭೀಮನಾಯ್ಕ ನಾಯ್ಕರ, ಲಕ್ಷ್ಮಣ ಚಿನ್ನನ್ನವರ, ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಕ್ಷತ್ರೀಯ ಸಮಾಜದ ಹಿರಿಯ ನಾಗರಿಕರು, ಮುಖಂಡರು, ಇಲ್ಲಿಯ ಶ್ರೀರಾಮ ಸೇವಾ ಸಮಿತಿ ಸದಸ್ಯರು, ಗಣ್ಯರು, ಸ್ಥಳೀಯರು ಇದ್ದರು.