RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಸರಕಾರಿ ನೌಕರಿ ಶ್ರೇಷ್ಠ ಹಾಗೂ ಪವಿತ್ರ ವೃತ್ತಿಯಾಗಿದೆ : ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ

ಗೋಕಾಕ:ಸರಕಾರಿ ನೌಕರಿ ಶ್ರೇಷ್ಠ ಹಾಗೂ ಪವಿತ್ರ ವೃತ್ತಿಯಾಗಿದೆ : ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ 

ಸರಕಾರಿ ನೌಕರಿ ಶ್ರೇಷ್ಠ ಹಾಗೂ ಪವಿತ್ರ ವೃತ್ತಿಯಾಗಿದೆ : ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 11 :

 
ಸರಕಾರಿ ನೌಕರಿ ಶ್ರೇಷ್ಠ ಹಾಗೂ ಪವಿತ್ರ ವೃತ್ತಿಯಾಗಿದ್ದು, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಅದರ ಘನತೆಯನ್ನು ಹೆಚ್ಚಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

ರವಿವಾರದಂದು ಸಾಯಂಕಾಲ ನಗರದ ಶ್ರೀ ಮಹಾಲಕ್ಷ್ಮಿಸಭಾಂಗಣದಲ್ಲಿ ತಾಲೂಕು ಮಟ್ಟದ ನೌಕರರ ಸಮ್ಮೇಳನ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಗೋಕಾಕ ತಾಲೂಕು ಶಾಖೆಯ ಕಾರ್ಯಾಲಯದ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ ಗುಣಮಟ್ಟದ ಸೇವೆಯಿಂದ ಸಮಾಜ ಒಪ್ಪುವ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು.

ರಾಜ್ಯ ಸರಕಾರಿ ನೌಕರರಿಗೂ ಸಹ ಕೇಂದ್ರ ಸರಕಾರ ನೌಕರರ ಮಾದರಿ ವೇತನವನ್ನು ನೀಡಲು ರಾಜ್ಯ ಸರಕಾರ ಸಿದ್ದತೆ ನಡೆಸುತ್ತಿರುವದು ಸಂಸತದ ಸಂಗತಿಯಾಗಿದೆ. ಸರಕಾರವು ನಮ್ಮ ಸಂಘದ ಬೇಡಿಕೆಗಳಿಗೆ ಹೋರಾಟ ವಿಲ್ಲದೆ ಮನವಿಗೆ ಸ್ವಂದಿಸಿ ತುಟ್ಟಿ ಭತ್ತೆಯನ್ನು ಹೆಚ್ಚಿಸಿದೆ. ಹಲವಾರು ಸೌಲಭ್ಯಗಳನ್ನು ನೀಡಿ ನೌಕರರನ್ನು ಪ್ರೋತ್ಸಾಹಿಸುತ್ತಿರುವದು ಶ್ಲಾಘನೀಯ ವೆಂದರು.

ಇದಕ್ಕೆಲ್ಲಾ ಸಂಘ ಒಗ್ಗಟ್ಟಿನಿಂದ ಬಲಿಷ್ಠವಾಗಿರುವದೆ ಕಾರಣ ರಾಜ್ಯಾದ್ಯಂತ ಸಂಚರಿಸಿ ಸಂಘಟನೆಯನ್ನು ಬಲಿಷ್ಠ ಗೋಳಿಸುವದರೊಂದಿಗೆ ನೌಕರರ ಸಮಸ್ಯೆಗೂ ಸ್ವಂದಿಸುತ್ತಿದ್ದೇವೆ . ಗೋಕಾಕ ಸಂಘಟನೆಯು ಸದೃಢವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳ ಸಹಕರಾದಿಂದ ನೆಮ್ಮದಿ ಹಾಗೂ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಿಕ ಮಾತನಾಡಿ ಗೋಕಾಕ ಹಾಗೂ ಮೂಡಲಗಿ ತಾಲೂಕುಗಳು ಶಾಸಕರ ಸಹಕಾರ ನೌಕರರ ಕಾರ್ಯದಕ್ಷತಯಿಂದ ವಿಶೇಷ ಸ್ಥಾನ ಪಡೆದಿವೆ. ಕಛೇರಿ ಹಾಗೂ ಕುಟುಂಬ ಸಮನಾಗಿ ನಿಭಾಯಿಸಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸೇವಾ ಭಾವನೆಯಿಂದ ಕಾರ್ಯನಿರ್ವಹಿಸಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತಿರುವ ಮಹಾನ ಭಾರತ ದೇಶದಲ್ಲಿ ನಾವೆಲ್ಲ ಜವಾಬ್ದಾರಿಯಿಂದ ಆದರ್ಶವಾಗಿ ನಮ್ಮ ಕರ್ತವ್ಯವನ್ನು ನಿಭಾಯಿಸೋಣ ಎಂದರು.
ಸಮ್ಮೇಳನವನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.
ವೇದಿಕೆಯಲ್ಲಿ ರಾಜ್ಯ ಸಂಘಟನೆಯ ಶ್ರೀನಿವಾಸ ತಿಮ್ಮೇಗೌಡರ, ಮಲ್ಲಿಕಾರ್ಜುನ ಬಳ್ಳಾರಿ, ಎಂ.ವ್ಹಿ ರುದ್ರಪ್ಪ , ಎಸ್.ಬಸವರಾಜ, ಸುರೇಶ್ ಚಿಡಬಾಳ, ವೆಂಕಟೇಶಯ್ಯ , ಗಿರಿಗೌಡ, ಮೋಹನಕುಮಾರ, ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಮುರಗೋಡ , ಭೀಮಗೌಡ ಪೊಲೀಸಗೌಡರ, ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಡಿವೈಎಸ್ಪಿ ಮನೋಜಕುಮಾರ ನಾಯಕ, ಬಿಇಒಗಳಾದ ಜಿ.ಬಿ.ಬಳಗಾರ, ಎ.ಸಿ .ಮನ್ನಿಕೇರಿ ಇದ್ದರು.

Related posts: