RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಹಳ್ಳಿಗಳಿಗೆ ಅಮ್ಮತಧಾರೆ ಎರೆದ ಯುವ ಅಧಿಕಾರಿ ಬಸವರಾಜ ಹೆಗ್ಗನಾಯಕ

ಗೋಕಾಕ:ಹಳ್ಳಿಗಳಿಗೆ ಅಮ್ಮತಧಾರೆ ಎರೆದ ಯುವ ಅಧಿಕಾರಿ ಬಸವರಾಜ ಹೆಗ್ಗನಾಯಕ 

ಹಳ್ಳಿಗಳಿಗೆ ಅಮ್ಮತಧಾರೆ ಎರೆದ ಯುವ ಅಧಿಕಾರಿ ಬಸವರಾಜ ಹೆಗ್ಗನಾಯಕ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 21:

 

ವಿಶೇಷ ವರದಿ :

ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿನ ಅಂಗವಾಗಿ ಸರಕಾರ ಹಳ್ಳಿಗಳ ಸರ್ವೋತ್ತಮ ಅಭಿವೃದ್ಧಿಗೆ ಮುಂದಾಗಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯನ್ನು ರೂಪಿಸಿ ಹಳ್ಳಿಗಳ ಅಭಿವೃದ್ಧಿಗಾಗಿ ರಾಜ್ಯದ ಹಲವು ಗ್ರಾಮ ಪಂಚಾಯಿತಿಗಳನ್ನು ಈ ಯೋಜನೆಯಡಿ ಆಯ್ಕೆ ಮಾಡಿದೆ. ಅದಕ್ಕೆ ನಮ್ಮ ಅವಿಭಜಿತ ಬೆಳಗಾವಿ ಜಿಲ್ಲೆಯು ಒಂದು.
ರಾಜ್ಯದ ಬೆಂಗಳೂರು ಬಿಟ್ಟರೆ ಅತಿ ದೊಡ್ಡ ಜಿಲ್ಲೆಗೆ ಪಾತ್ರವಾಗಿರುವ ಬೆಳಗಾವಿ ಜಿಲ್ಲೆಯ ಸುಮಾರು 59 ಗ್ರಾಮ ಪಂಚಾಯಿತಿಗಳನ್ನು ಸರಕಾರ ಈ ಯೋಜನೆಯಡಿ ಆಯ್ಕೆ ಮಾಡಿ ಅಭಿವೃದ್ಧಿ ಮಾಡುತ್ತಿದೆ. ಈ ಯೋಜನೆ 100ಕ್ಕೆ ನೂರರಷ್ಟು ಅನುಷ್ಠಾನ ಗೊಳಿಸುವ ಜವಾಬ್ದಾರಿಯನ್ನು ಆಯಾ ಜಿಪಂ ಉಪ ಕಾರ್ಯದರ್ಶಿಗಳಿಗೆ ನೀಡಿ ಇವುಗಳ ಸರ್ವೋತ್ತಮ ಅಭಿವೃದ್ಧಿಗಳಿಗೆ ಸರಕಾರ ಪಣ ತೊಟ್ಟಿದೆ.
ಹಾಗೆ ಬೆಳಗಾವಿ ಜಿಪಂ ವ್ಯಾಪ್ತಿಯಲ್ಲಿ ಬರುವ ಒಟ್ಟು 59 ಗ್ರಾಪಂಗಳಿಗೆ ಈ ಯೋಜನೆಯ ಉದ್ದೇಶಗಳನ್ನು ತಿಳಿ ಹೇಳಿ ಅನುದಾನವನ್ನು ಸದುಪಯೋಗ ಪಡೆಸಿಕೊಂಡು ಅಭಿವೃದ್ಧಿ ಹೊಂದುವಂತೆ ಮಾಡುವ ಮಹತ್ತರ ಜವಾಬ್ದಾರಿ ಹೊತ್ತುಕೊಂಡು ಕಾರ್ಯ ನಿರ್ವಹಿಸಿ ” ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾಗಿರುವ ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ ) ಬಸವರಾಜ ಹೆಗ್ಗನಾಯಕ ಅವರ ಕಾರ್ಯ ಇತರರಿಗೆ ಮಾದರಿಯಾಗಿದೆ.

ಅಮೃತ ಯೋಜನೆಯಡಿ ಬೀದಿ ದೀಪ ಅಳವಡಿಕೆ, ಪ್ರತಿ ಮನೆಗಗಳಿಗೆ ಕುಡಿಯುವ ನೀರಿನ ನಳಗಳನ್ನು ಆಳವಡಿಸುವದು, ತ್ಯಾಜ್ಯ ನೀರು ವೈಜ್ಞಾನಿಕವಾಗಿ ವಿಸರ್ಜಿಸುವದು, ಪಂಚಾಯಿತಿ ಕಟ್ಟಡಗಳಿಗೆ ಸೌರ ವಿದ್ಯುತ್ ಆಳವಡಿಸುವದು, ಉದ್ಯಾನವನಗಳ ನಿರ್ಮಾಣ, ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲ್ ಗೋಳಿಸುವದು, ಅಗತ್ಯ ವಿರುವ ಅಂಗನವಾಡಿ,ಶಾಲೆಗಳಿಗೆ ಶೌಚಾಲಯ ಹಾಗೂ ಕುಡಿಯುವ ನೀರಿನ ಸೌಲಭ್ಯಗಳನ್ನು ಕಲ್ಪಿಸುವುದು,ಕೆರೆಗಳನ್ನು ಪುನಶ್ಚೇತನಗೋಳಿಸುವದು, ಶಾಲೆಗಳಿಗೆ ಆವರಣ ಗೋಡೆ ಹಾಗೂ ಆಟದ ಮೈದಾನಗಳನ್ನು ನಿರ್ಮಿಸುವದು ಸೇರಿದಂತೆ ಇತರ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವದೆ ಈ ಅಮೃತ ಯೋಜನೆಯ ಉದ್ದೇಶ. ಇದರ ಮತ್ತೊಂದು ವಿಶೇಷತೆ ಎಂದರೆ ಗ್ರಾಪಂಗಳಲ್ಲಿ ಲಭ್ಯ ವಿರುವ ಅನುದಾನವನ್ನೇ ಬಳಸಿಕೊಂಡು ಅಮೃತ ಯೋಜನೆಗೆ ಖರ್ಚು ಮಾಡಬೇಕು. ಇದರ ಬಗ್ಗೆ ಪ್ರತಿ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಪಂ ಸದಸ್ಯರಿಗೆ ಈ ಯೋಜನೆಯ ಮಹತ್ವ ತಿಳಿ ಹೇಳಿ ವಿವಿಧ ಯೋಜನೆಯಡಿಯ ಅನುದಾನ ಬಳಸಿಕೊಳ್ಳುವ ಬಗ್ಗೆ ಮನವರಿಕೆ ಮಾಡಿ ಅಭಿವೃದ್ಧಿ ಪಡೆಸಬೇಕು ಅಭಿವೃದ್ಧಿ ಕಾರ್ಯ ಮುಗಿದ ತಕ್ಷಣ ರೂ 25 ಲಕ್ಷ ಅನುದಾನ ನೀಡಲಾಗುತ್ತದೆ. ಈ ಕಾರ್ಯ ಅತ್ಯಂತ ಸುಸೂತ್ರವಾಗಿ ಮಾಡಿರುವ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

100ಕ್ಕೆ ನೂರರಷ್ಟು ತೆರಿಗೆ ವಸೂಲಿ : ಬೆಳಗಾವಿ ಜಿಪಂ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಕಳೆದ ಕೆಲವು ವರ್ಷಗಳಿಂದ ಜಿಪಂದಲ್ಲಿ ಉಪಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರ ಯೋಜನೆಗಳು ಸರಿಯಾಗಿ ಅನುಷ್ಠಾನ ಗೊಳಿಸುವುದರೊಂದಿಗೆ ತಮ್ಮ ಅನುಭವವನ್ನು ಧಾರೆಯರೆದು ಗ್ರಾಮ ಪಂಚಾಯಿತಿಗಳನ್ನು ಮಾದರಿ ಮಾಡುವಲ್ಲಿ ಶ್ರಮಿಸುತ್ತಿರುವ ಹೆಗ್ಗನಾಯಕ ಅವರು ಈ ಭಾರಿ 100ಕ್ಕೆ ನೂರರಷ್ಟು ತೆರಿಗೆ ವಸೂಲಿ ಮಾಡಿ ಸೈ ಎನಿಸಿಕೊಂಡಿದ್ದಾರೆ. ಗ್ರಾಪಂ ಅಧಿಕಾರಿಗಳೊಂದಿಗೆ ಸ್ವತ ತಾವೇ ಪ್ರತಿಯೊಂದು ಪಂಚಾಯಿತಿಗೆ ಭೇಟಿ ನೀಡಿ ಕರ , ತೆರಿಗೆ ಬಗ್ಗೆ ಜಾಗೃತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದರ ಬಗ್ಗೆ ತಿಳಿಹೇಳಿ ಪ್ರತಿಯೊಬ್ಬರೂ ಪಂಚಾಯಿತಿಗೆ ತೆರಿಗೆ ತುಂಬುವಲ್ಲಿ ಮಹತ್ತರ ಪಾತ್ರ ವಹಿ‌ಸಿದ್ದಾರೆ. ಕಳೆದ ಎರೆಡು ವರ್ಷಗಳಿಂದ ಕೋರೋನಾ ಮಹಾಮಾರಿಯಿಂದ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅವರು ಸರಕಾರಕ್ಕೆ ತುಂಬಬೇಕಾದ ಕರಗಳ ಬಗ್ಗೆ ಮಾಹಿತಿ ನೀಡಿ ಪ್ರತಿಯೊಬ್ಬರು ಸಹ ತೆರಿಗೆ ತುಂಬುವಂತೆ ಪ್ರೇರಿಪಿಸಿ ಅವರು ಸ್ವಯಂ ಪ್ರೇರಣೆಯಿಂದ ತೆರಿಗೆ ತುಂಬುವಂತೆ ಮಾಡಿದ್ದಾರೆ ಯುವ ಉತ್ಸಾಹಿ ಅಧಿಕಾರಿ ಬಸವರಾಜ ಹೆಗ್ಗನಾಯಿಕ. ಇವರ ಈ ಕಾಳಜಿ ಮತ್ತು ಪ್ರಯತ್ನದಿಂದ ಜಿಲ್ಲೆಯ ಎಲ್ಲಾ ಪಂಚಾಯಿತಿಗಳು ನೂರಕ್ಕೆ ನೂರರಷ್ಟು ಕರ ವಸೂಲಿ ಮಾಡುವಲ್ಲಿ ಯಶಸ್ವಿ ಕಂಡಿವೆ.
ಹೀಗೆ ಒಂದಿಲ್ಲೊಂದು ವಿಶೇಷ ,ವಿಶಿಷ್ಟ ಕಾರ್ಯಗಳಿಂದ ಸಾರ್ವಜನಿಕರ ಮನಗಳಲ್ಲಿ ಮನೆ ಮಾಡಿರುವ ಬಸವರಾಜ ಹೆಗ್ಗನಾಯಕ ಅವರು ಅಮೃತ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಹಾಗೂ ನೂರಕ್ಕೆ ನೂರರಷ್ಟು
ಕರ ವಸೂಲಿ ಮಾಡುವಲ್ಲಿ ಅವಿರತ ಶ್ರಮಿಸಿದ್ದಾರೆ. ಇಂತಹ ರಚನಾತ್ಮಕ ಕಾರ್ಯಗಳನ್ನು ಪರಿಗಣಿಸಿಯೇ ಯುವ ಅಧಿಕಾರಿ ಬಸವರಾಜ ಹೆಗ್ಗನಾಯಕ ಅವರಿಗೆ ಇಂದು ಸರ್ವೋತ್ತಮ ಸೇವಾ ಪ್ರಶಸ್ತಿ ದೊರಕಿದೆ. ಇಂತಹ ಹತ್ತಾರು ಪ್ರಶಸ್ತಿಗಳು ಅವರಿಗೆ ಲಭಿಸಲಿ ಎಂದು ಅವರು ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.

Related posts: