RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಶರಣೆ ಅಕ್ಕಮಹಾದೇವಿ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ : ಡಾ.ರಂಜನಾ

ಗೋಕಾಕ:ಶರಣೆ ಅಕ್ಕಮಹಾದೇವಿ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ : ಡಾ.ರಂಜನಾ 

ಶರಣೆ ಅಕ್ಕಮಹಾದೇವಿ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ : ಡಾ.ರಂಜನಾ

 

ನಮ್ಮ ಬೆಳಗಾವಿ ಇ – ವಾರ್ತೃ, ಗೋಕಾಕ ಏ 24 :

 
12ನೇ ಶತಮಾನದಲ್ಲಿ ಸಮಾಜಕ್ಕೆ ಮಾರ್ಗದರ್ಶನ ನೀಡುವಂತ ವಚನಗಳನ್ನು ನೀಡಿದ ಮಹಿಳಾ ಮಾನವತಾವಾದಿ ಶರಣೆ ಅಕ್ಕಮಹಾದೇವಿ ಅವರ ಆದರ್ಶಗಳು ಎಲ್ಲರಿಗೂ ದಾರಿದೀಪವಾಗಿವೆ ಎಂದು ಇಲ್ಲಿನ ವೈದ್ಯೆ ಡಾ.ರಂಜನಾ ರಾಯರ ಹೇಳಿದರು.

ಶನಿವಾರದಂದು ನಗರದ ಬಸವ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಾಗೂ ಭಾವಯಾನ ಸಾಂಸ್ಕೃತಿಕ ವೇದಿಕೆ ಅವರು ಅಕ್ಕಮಹಾದೇವಿ ಜಯಂತಿ ನಿಮಿತ್ತ ಆಯೋಜಿಸಿದ್ದ ಅಕ್ಕಮಹಾದೇವಿ ವಚನಗಳ ವಾಚನ, ಗಾಯನ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಅಕ್ಕಮಹಾದೇವಿಯವರ ವಚನಗಳು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಮೂಲಕ ಸಮಾಜದ ಪರಿವರ್ತನೆಯೊಂದಿಗೆ ಅವರಲ್ಲಿ ಧೈರ್ಯ ಆತ್ಮವಿಶ್ವಾಸ ಮೂಡಿಸುತ್ತಿದ್ದವು ದೇಹ ಭಾಷೆಯಯನ್ನು ದೇವ ಭಾಷೆಯನ್ನಾಗಿಸಿ ಶರಣೆ ಅಕ್ಕಮಹಾದೇವಿ ಮ‌ಹಿಳೆಯರನ್ನು ಉನ್ನತ ಸ್ಥಾನಕ್ಕೆ ಏರಿಸಿದ್ದರು . ಅವರ ವಚನಗಳು ನಾವೆಲ್ಲಾ ಆಚರಣೆಗೆ ತರೋಣ ಎಂದು ಹೇಳಿದರು.

ವೇದಿಕೆಯ ಮೇಲೆ ಕಸಾಪ ತಾಲೂಕು ಅಧ್ಯಕ್ಷೆ ಭಾರತಿ ಮದಬಾಂವಿ, ಪುಷ್ಪಾ ಮುರಗೋಡ, ಮಹಾನಂದಾ ಪಾಟೀಲ ಇದ್ದರು.

Related posts: