ಗೋಕಾಕ:ಯವಕನ ಕೊಲೆ ಪ್ರಕರಣ ಆರು ಜನರ ಬಂಧನ
ಯವಕನ ಕೊಲೆ ಪ್ರಕರಣ ಆರು ಜನರ ಬಂಧನ
ಗೋಕಾಕ ಸೆ 27: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ನಗರದ ಮುಖ್ಯ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆ ಮಾಡಿದ ಆರೋಪಿಗಳಲ್ಲಿ ಆರು ಜನ ಯುವಕರನ್ನು ಪೋಲೀಸರು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಳೆದ ದಿ. 24ರಂದು ರಾತ್ರಿ ಗ್ರಾಮದೇವತೆಯ ಮಂದಿರದ ಬಳಿ ಮುಖ್ಯ ರಸ್ತೆಯಲ್ಲಿ ರೋಹಿತ ಪಾಟೀಲ ಎಂಬ ಯುವಕನನ್ನು ಕಾರ್‍ನಲ್ಲಿ ಬಂದು ಏಳೆಂಟು ಜನರು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಕೊಲೆ ಆರೋಪಿಗಳ ಪತ್ತೆಗಾಗಿ ಸಿಪಿಐಗಳಾದ ಎಸ್.ಆರ್.ಕಟ್ಟೀಮನಿ, ವೀರೇಶ ದೊಡಮನಿ ಹಾಗೂ ಎಮ್.ಎಸ್.ತಾನಪ್ಪಗೋಳ ಅವರ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಹತ್ತರಕಿ ಟೋಲ ನಾಕಾ ಬಳಿ ಆರೋಪಿಗಳು ಇರುವದನ್ನು ಪತ್ತೆ ಹಚ್ಚಿ ಧಾಳಿ ನಡೆಸಿ ಮಲ್ಲಿಕಾರ್ಜುನ ಉರ್ಫ ಮಲಿಕ್ಯಾ ಬಾಳಪ್ಪ ಭಜಂತ್ರಿ, ಅರ್ಜುನ ಗಣಪತಿ ಚಿಕ್ಕೋರ್ಡೆ. ಕುಮಾರ ಉರ್ಫ ಕುಮ್ಯಾ ತಮ್ಮು ಸನದಿ, ಪರಸು ಉರ್ಫ ಕೇಟಾ ಪರಸು ಉರ್ಫ ಪ್ರಕಾಶ ಹಣಮಂತ ಖಾನಪ್ಪನವರ, ವಿಜಯ ಜಗದೀಶ ಶೀಲವಂತ, ಪರುಶರಾಮ ರಾಮಸಿದ್ಧ ಶಿವನಪ್ಪಗೋಳ ಹಾಗೂ ಈ ಪ್ರಕರಣದಲ್ಲಿ ಅಪರಾಪ್ತ ಬಾಲಕನನ್ನು ಸಹ ಪೋಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳು ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ತಾಲೂಕಿನ ಚಿಕ್ಕನಂದಿ ಸೇತುವೆ ಬಳಿ ಎಸೆದಿದ್ದರು. ಅದನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಪತ್ತೆ ಹಚ್ಚಿ ಬಂಧಿಸುವಲ್ಲಿ ಗೋಕಾಕ ಗ್ರಾಮೀಣ ಪೋಲೀಸ ಠಾಣೆಯ ಪಿಎಸ್‍ಐ ಜಿ.ಬಿ.ಕೊಂಗನೊಳ್ಳಿ, ಎಎಸ್‍ಐ ಎಮ್.ಎಸ್.ಏಕಣೆ, ಸಿಬ್ಬಂದಿಗಳಾದ ಡಿ.ವೈ.ನಾಯ್ಕರ, ಎನ್.ಬಿ.ತಡಸಲೂರ, ಎಸ್.ಆರ್.ದೇಸಾಯಿ, ಎ.ಎ.ಶ್ಯಾಂಡಗೆ, ಎಮ್.ಎಸ್.ದೇಶನೂರ, ಎಚ್.ಬಿ.ಮಾಲದಿನ್ನಿ ಅವರು ಬಹುವಾಗಿ ಶ್ರಮಿಸಿದ್ದಾರೆ.