ಗೋಕಾಕ:ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಪ್ರೋ ಎಚ್.ಬಿ.ರಾಮದುರ್ಗ
ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಪ್ರೋ ಎಚ್.ಬಿ.ರಾಮದುರ್ಗ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಏ 28:
ವಿದ್ಯಾರ್ಥಿಗಳು ವೃತ್ತಿಪರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಉದ್ಯೋಗ ಹೊಂದಿ ನೆಮ್ಮದಿಯ ಜೀವನ ಸಾಗಿಸುವಂತೆ ಹುಬ್ಬಳ್ಳಿಯ ಸರಕಾರಿ ನರ್ಸಿಂಗ್ ಕಾಲೇಜಿನ ಉಪ ಪ್ರಾಚಾರ್ಯ ಪ್ರೋ ಎಚ್.ಬಿ.ರಾಮದುರ್ಗ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ನರ್ಸಿಂಗ್ ಮಹಾ ವಿದ್ಯಾಲಯದ ಜಿ.ಎನ್.ಎಂ ನರ್ಸಿಂಗ್ ವಿದ್ಯಾರ್ಥಿಗಳ ದೀಪ ಪ್ರಜ್ವಲನೆ ಹಾಗೂ ಪ್ರತಿಜ್ಞಾವಿದಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ವೃತ್ತಿಪರ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳಿದ್ದು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ. ನರ್ಸಿಂಗ್ ಕಲಿತ ವಿದ್ಯಾರ್ಥಿಗಳು ತಮ್ಮ ಉದ್ಯೋಗದೊಂದಿಗೆ ರೋಗಿಗಳ ಸೇವೆ ಮಾಡುವಂತಹ ಪವಿತ್ರ ಕಾರ್ಯದಲ್ಲಿಯೂ ಪಾಲ್ಗೋಳುವಿರಿ ಶಿಸ್ತುಬದ್ಧವಾಗಿ ಕಠಿಣ ಪರಿಶ್ರಮದಿಂದ ಹೆಚ್ಚಿನ ಜ್ಞಾನ ಪಡೆದು ತಮ್ಮ ಬದುಕನ್ನು ಉಜ್ವಲ ಗೊಳಿಸುಕೊಳ್ಳುವಂತೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ರಾಣಿ ಚೆನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕಿನ ನಿರ್ದೇಶಕಿ ರೂಪಾ ಮುನ್ನವಳ್ಳಿ ವಹಿಸಿದ್ದರು.
ವೇದಿಕೆಯ ಮೇಲೆ ಪ್ರಾಚಾರ್ಯ ಆನಂದ ಎಚ್.ಶಿಕ್ಷಕ ಕಲ್ಲಪ್ಪ ನಾಯಿಕ ಇದ್ದರು.