ಗೋಕಾಕ:ಮನಕುಲದ ಉದ್ದಾರಕ್ಕಾಗಿ ಹಲವಾರು ಧರ್ಮಗಳು ಹುಟ್ಟಿಕೊಂಡಿವೆ : ಮುರುಘರಾಜೇಂದ್ರ ಶ್ರೀ
ಮನಕುಲದ ಉದ್ದಾರಕ್ಕಾಗಿ ಹಲವಾರು ಧರ್ಮಗಳು ಹುಟ್ಟಿಕೊಂಡಿವೆ : ಮುರುಘರಾಜೇಂದ್ರ ಶ್ರೀ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 1 :
ನಗರದ ಕುಮಾರಿ ವಿಶಾಖಾ ಗೌತಮ ರಾಠೋಡ ಇವರು ಜೈನ ಧರ್ಮದ ಸನ್ಯಾಸತ್ವ ಜೀವನದ ದೀಕ್ಷೆ ಪಡೆಯಲ್ಲಿದ್ದು, ಅದರ ನಿಮಿತ್ತ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಮಠದ ಭಕ್ತ ವೃಂದದಿಂದ ಅಭಿನಂದನಾ ಸಮಾರಂಭವನ್ನು ರವಿವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಮನಕುಲದ ಉದ್ದಾರಕ್ಕಾಗಿ ಹಲವಾರು ಧರ್ಮಗಳು ಹುಟ್ಟಿಕೊಂಡಿವೆ ಅದರಲ್ಲಿ ಜೈನ ಧರ್ಮವು ಒಂದಾಗಿದ್ದು, ಅಹಿಂಸೆಯ ಸಂದೇಶವನ್ನು ಜಗತ್ತಿಗೆ ನೀಡಿದೆ. ಭಗವಾನ ಮಹಾವೀರ ಹಾಗೂ ನೇಮಿನಾಥ ತೀರ್ಥಂಕರು ಮಹಾನ ತಪ್ಪಸ್ವಿ ಯಾಗಿದ್ದರು. ಅವರ ಹಾಕಿ ಕೊಟ್ಟ ದಾರಿಯಲ್ಲಿ ನಾವಿಂದು ಸಾಗಬೇಕಾಗಿದೆ.
ಧರ್ಮ ಧರ್ಮದಲ್ಲಿ ಸಾಮರಸ್ಯವನ್ನು ಬೆಳೆಸುವ ಕಾರ್ಯ ಇಂದಿನ ಯುಗದಲ್ಲಿ ಆಗಬೇಕಾಗಿದೆ.ಅಂತಹ ಕಾರ್ಯಗಳನ್ನು ಎಲ್ಲರ ಸಹಕಾರದಿಂದ ಶ್ರೀ ಮಠದಿಂದ ಮಾಡುತ್ತಿದ್ದೆವೆ . ಜಗತ್ತಿನ ಹಂಗ ತೊರೆದು ಜೀವಿಸುವವರೆ ಸನ್ಯಾನಿಗಳು, ಶರಣರಿಗೆ ಮರಣವೇ ಮಹಾನವಮಿ ಅಂತಹ ಪವಿತ್ರ ಜೀವನವನ್ನು ಸ್ವೀಕರಿಸುತ್ತಿರುವ ಕುಮಾರಿ ವಿಶಾಖಾ ಅವರಿಂದ ಧಾರ್ಮಿಕ ಜಾಗೃತಿ ಕಾರ್ಯ ನಡೆಯಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಬರುವ ದಿನಾಂಕ 12 ರಂದು ನಗರದ ಶ್ರೀ ಮಹಾಲಕ್ಷ್ಮಿ ಸಭಾಂಗಣದಲ್ಲಿ ಜೈನ ಧರ್ಮದ ಸನ್ಯಾಸತ್ವ ದೀಕ್ಷೆ ಪಡೆಯಲಿದ್ದು , ಎಲ್ಲ ಸಮಾಜ ಭಾಂಧವರು ಪಾಲ್ಗೋ಼ಳುವಂತೆ ಸುರೇಶ ರಾಠೋಡ ವಿನಂತಿಸಿದರು.
ವೇದಿಕೆಯಲ್ಲಿ ಪ್ರೇಮಚಂದ ರಾಠೋಡ, ಬಸನಗೌಡ ಪಾಟೀಲ, ಜಯಾನಂದ ಮುನ್ನೋಳಿ, ಪ್ರವಿಣ ಓಸ್ವಾಲ, ಪರಶುರಾಮ ಭಗತ್ , ಬಸವರಾಜ ಹುಳ್ಳೇರ ಇದ್ದರು.
ಶಿಕ್ಷಕ ರಾಮಚಂದ್ರ ಕಾಕಡೆ ನಿರೂಪಸಿ , ವಂದಿಸಿದರು .