ಗೋಕಾಕ:ಮಹರ್ಷಿ ಶ್ರೀ ಭಗೀರಥರ ಪ್ರಯತ್ನ ಮನಕುಲಕ್ಕೆ ಮಾದರಿಯಾಗಿದೆ : ಡಾ.ಮಹಾದೇವ ಜಿಡ್ಡಿಮನಿ
ಮಹರ್ಷಿ ಶ್ರೀ ಭಗೀರಥರ ಪ್ರಯತ್ನ ಮನಕುಲಕ್ಕೆ ಮಾದರಿಯಾಗಿದೆ : ಡಾ.ಮಹಾದೇವ ಜಿಡ್ಡಿಮನಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 8 :
ಕಠಿಣ ಪರಿಶ್ರಮದಿಂದ ಯಶಸ್ವಿನ ಮೆಟ್ಟಿಲೇರ ಬಹುದು ಎಂದು ತೋರಿಸಿಕೊಟ್ಟ ಮಹರ್ಷಿ ಶ್ರೀ ಭಗೀರಥ ಪ್ರಯತ್ನ ಮನಕುಲಕ್ಕೆ ಮಾದರಿಯಾಗಿದೆ ಎಂದು ಶಿಕ್ಷಕ ಡಾ.ಮಹಾದೇವ ಜಿಡ್ಡಿಮನಿ ಹೇಳಿದರು.
ರವಿವಾರದಂದು ನಗರದ ಗುರುವಾರಪೇಠೆಯ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ತಾಲೂಕಾಡಳಿಡ, ತಾಲೂಕು ಪಂಚಾಯತ್, ನಗರಸಭೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ಶ್ರೀ ಭಗೀರಥ ಜಯಂತಿ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಗಂಗೆಯನ್ನು ಧರೆಗಿಳಿಸಿ ಗಂಗಾನದಿಯನ್ನಾಗಿಸಿ ಜನರ ನೀರಿನ ದಾಹ ತಿರಿಸಿದ ಭಗೀರಥರು ಪ್ರಯತ್ನ ಶೀಲತೆಯ ರೂಪಕವಾಗಿ ನಿಲ್ಲುತ್ತಾರೆ. ಎಲ್ಲಾ ಮಹತ್ಮರು ಮನುಕುಲದ ಉದ್ಧಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ವಿಶ್ವ ಮಾನವರಾಗಿದ್ದಾರೆ. ಅವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲರೂ ಸಂಘಟಿತರಾಗಿ ಅವರ ಜಯಂತಿಗಳನ್ನು ಆಚರಿಸಿದರೆ ಅರ್ಥಪೂರ್ಣವಾಗಿರುತ್ತದೆ ಎಂದರು.
ಮುಂಜಾನೆ ಹಮ್ಮಿಕೊಂಡ ಶೋಭಾಯಾತ್ರೆಗೆ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಚಾಲನೆ ನೀಡಿದರು.
ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಖಡಕಭಾಂವಿಯ ಅಭಿನವ ಧರೇಶ್ವರ ಸ್ವಾಮಿಜಿಯವರು ಕಾರ್ಯವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ಪೌರಾಯುಕ್ತ ಶಿವಾನಂದ ಹಿರೇಮಠ, ಬಿಇಒ ಜಿ.ಬಿ.ಬಳಗಾರ, ಪಿಎಸ್ಐ ಕೆ ವಾಲಿಕರ, ಅಧಿಕಾರಿಗಳಾದ ಆರ್.ಕೆ ಬಿಸಿರೋಟ್ಟಿ, ಎಸ್.ಬಿ.ವರಾಳೆ, ಮುಖಂಡರಾದ ಎಸ್.ಎಂ ಹತ್ತಿಕಟ್ಟಿಗೆ, ಸದಾಶಿವ ಗುದ್ದಗಳೋಳ, ಬಸವರಾಜ ಖಾನಪ್ಪನವರ, ಭರಮಣ್ಣ ಉಪ್ಪಾರ, ಭೀಮಶಿ ಭರಮನ್ನವರ, ಸುರೇಶ್ ಬಡೆಪ್ಪಗೋಳ, ವಿಷ್ಣು ಲಾತೂರ, ಮಾಯಪ್ಪ ತಹಶೀಲ್ದಾರ, ಅಡಿವೇಪ್ಪ ಕಿತ್ತೂರು,ಶಿವಪುತ್ರ ಜಕ್ಕಬಾಳ, ರಾಮಣ್ಣ ತಳ್ಳಿ, ಬಿ.ಆರ್.ಕೊಪ್ಪ, ಭಗವಂತ ಹುಳ್ಳಿ, ಎಲ್.ಎನ್. ಗುದಿಗೋಪ್ಪ, ಶಂಕರ ಧರೆನ್ನವರ, ವಿಲಾಶ ಗುಡ್ಡೇನ್ನವರ ಹಾಗೂ ತಾಲೂಕಿನ ಮಹರ್ಷಿ ಶ್ರೀ ಭಗೀರಥ ಸಮಾಜದ ಬಾಂಧವರು ಉಪಸ್ಥಿತರಿದ್ದರು.