ಗೋಕಾಕ:ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಕಟ್ಟಿ, ಕಿಡಿಗೇಡಿಗಳ ಅಟ್ಟಹಾಸ
ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಕಟ್ಟಿ, ಕಿಡಿಗೇಡಿಗಳ ಅಟ್ಟಹಾಸ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 11:
ಸುಪ್ರಭಾತ ವರ್ಸಸ್ ಅಜಾನ್ ಗೆ ರಾಜ್ಯ ಸರ್ಕಾರ ಹೊರಡಿಸಿದಂತ ಧ್ವನಿ ಅಡಗಿಸೋ ಮಾರ್ಗಸೂಚಿಯಿಂದ ಕೊಂಚ ಬ್ರೇಕ್ ಬಿದ್ದಂತೆ ಆಗಿದೆ. ಆದ್ರೇ.. ಇದೇ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಮಸೀದಿಯೊಂದರ ಮೇಲೆ ಕೇಸರಿ ಧ್ವಜ ಕಟ್ಟಿ, ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅರಭಾವಿ ಸಮಿಪವಿರುವ ಸತ್ತಿಗೇರಿ ಮಡ್ಡಿಯಲ್ಲಿರುವಂತ ಮಸೀದಿಯ ಮೈಕ್ ಹತ್ತಿರವೇ, ಕಿಡಿಗೇಡಿಗಳು ಕಳೆದ ರಾತ್ರಿ ಕೇಸರಿ ಧ್ವಜ ಕಟ್ಟಿ ಅಟ್ಟಹಾಸ ಮೆರೆದಿದ್ದಾರೆ. ಮಸೀದಿಯ ಮೇಲೆ ಕೇಸರಿ ಧ್ವಜ ಕಟ್ಟಿದ್ದರಿಂದ ಇಂದು ಮುಂಜಾನೆ ಬಿಗುವಿನ ವಾತಾವರಣ ಕೂಡ ಉಂಟಾಗಿತ್ತು. ಪೊಲೀಸರ ಮದ್ಯಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದು, ಮಸೀದಿಗೆ ಕಟ್ಟಲಾಗಿದ್ದಂತ ಕೇಸರಿ ಧ್ವಜನವನ್ನು ಮುಖಂಡರ ಸಮ್ಮುಖದಲ್ಲೇ ಕೆಳಗೆ ಇಳಿಸಲಾಗಿದೆ. ಈಗ ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದಂತ ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.