RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಕ ಪೂಜಾರಿ

ಗೋಕಾಕ:ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಕ ಪೂಜಾರಿ 

ಭಗತ್‍ಸಿಂಗ್ ರ ದೇಶ ಭಕ್ತಿ ಯುವ ಜನಾಂಗಕ್ಕೆ ಪ್ರೇರಕ : ಬಿಜೆಪಿ ಮುಖಂಡ ಅಶೋಶ ಪೂಜಾರಿ 

ಗೋಕಾಕ ಸೆ 28: ತಮ್ಮ ತನು-ಮನದಲ್ಲಿ ದೇಶ ಭಕ್ತಿಯನ್ನೇ ಸಂಪೂರ್ಣವಾಗಿ ಆವರಿಸಿಕೊಂಡಿದ್ದ ಅಪ್ಪಟ ದೇಶಭಕ್ತ ಶ್ರೀ ಭಗತ್‍ಸಿಂಗ್ ಅವರು ತಮ್ಮ ಯೌವನಾವಸ್ಥಿಯ ಹೊಸ್ತಿಲಲ್ಲಿಯೇ ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ದೇಹವನ್ನೇ ಬಲಿದಾನವನ್ನಾಗಿ ನೀಡಿದ ಅಪ್ಪಟ ದೇಶಭಕ್ತ. ಅವರ ಸಾಹಸಮಯ ಜೀವನ ಶೈಲಿ, ಅಘಾದವಾದ ದೇಶಭಕ್ತಿ, ಅವರ ದಿವ್ಯ ಚೇತನ ಶಕ್ತಿ ಇಂದಿಗೂ, ಮುಂದೆಂದೆಂದಿಗೂ ದೇಶದ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದೆ ಎಂದು ಬಿ.ಜೆ.ಪಿ ಮುಖಂಡ ಅಶೋಕ ಪೂಜಾರಿ ಹೇಳಿದರು.

ನಗರದ ಕುಂಬಾರ ಗಲ್ಲಿಯ ಶ್ರೀ ಭಗತಸಿಂಗ್ ವೃತ್ತದಲ್ಲಿರುವ ಶ್ರಿ ಭಗತ್‍ಸಿಂಗ್ ಪ್ರತಿಮೆಯ ಮುಂದೆ ಶ್ರೀ ಭಗತಸಿಂಗ್ ಯುವಕ ಸಂಘವು ಏರ್ಪಡಿಸಿದ್ದ ಶ್ರೀ ಭಗತಸಿಂಗ್ ಜನ್ಮ ದಿನೋತ್ಸವದ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಯುವಜನಾಂಗದ ಸ್ವಾಭಿಮಾನದ ಸಂಕೇತ ಮತ್ತು ದೇಶಭಕ್ತಿಯ ಆರಾಧಕರಾಗಿದ್ದ ಶ್ರೀ ಭಗತ್‍ಸಿಂಗ್ ಅವರ ನೆನಪಿನ ಈ ವೃತ್ತವನ್ನು ಸುಂದರವಾಗಿ ಅಭಿವೃದ್ಧಿ ಪಡಿಸುವ ಅವಶ್ಯಕತೆ ಇದ್ದು, ನಗರಸಭೆ ಮತ್ತು ಸರಕಾರ ಈ ಕುರಿತು ಕೂಡಲೇ ಕಾರ್ಯ ಪ್ರವತ್ತರಾಗಬೇಕೆಂದು ಆಗ್ರಹಿಸಿದರು.

ಮುಖ್ಯ ವ್ಯಾಖ್ಯಾನುಕಾರರಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಬೆಳಗಾವಿ ವಿಭಾಗದ ಜಿಲ್ಲಾ ಸಂಚಾಲಕ ನಾರಾಯಣ ಮಠಾಧಿಕಾರಿ ಮಾತನಾಡಿ, ಕ್ರಾಂತಿಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ತರಲು ಸಾಧ್ಯವೆಂದು ನಂಬಿದ್ದ ಶ್ರೀ ಭಗತಸಿಂಗ್ ಅವರು ಬ್ರಿಟೀಷ್ ಸರಕಾರದ ಧಮನಕಾರಿ ನೀತಿಯನ್ನು ಆಕ್ರಮಣಕಾರಿ ಮನೋಭಾವನೆ ಮತ್ತು ಶೈಲಿಯಿಂದ ವಿರೋಧಿಸಿ ಪ್ರತಿಭಟಿಸಿದ ಹೋರಾಟಗಾರ. ಅನೇಕ ಯುವ ಸ್ವಾತಂತ್ರ್ಯ ಹೋರಾಟಗಾರರನ್ನು ಸಂಘಟಿಸುವ ಮೂಲಕ ಬ್ರಿಟೀಷ್ ಸರಕಾರಕ್ಕೆ ಚಳಿ ಮುಟ್ಟಿಸಿದ ಶ್ರೀ ಭಗತ್ ಸಿಂಗ್ ಅವರು ತಮ್ಮ ಜೀವವನ್ನೇ ಈ ಹೋರಾಟದಲ್ಲಿ ದೇಶಕ್ಕಾಗಿ ಅರ್ಪಣೆ ಮಾಡಿದ ಅಪ್ಪಟ ದೇಶಭಕ್ತ. ಅವರ ದೇಶಭಕ್ತಿಯ ನಡೆಯೇ ಇಂದು ನಮ್ಮಲ್ಲಿ ಸ್ವಾತಂತ್ರ್ಯದ ಸ್ವಾಭಿಮಾನವನ್ನು ಸದಾ ಜೀವಂತವಾಗಿರಿಸಿದೆ ಎಂದು ಹೇಳಿದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಮುರುಘರಾಜೇಂದ್ರ ಸ್ವಾಮಿಗಳು ಶೂನ್ಯ ಸಂಪಾನಮಠ ಗೋಕಾಕ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಆನಂದ ಗೋಟಡಕಿ, ಶ್ರೀ ಭಗತ್‍ಸಿಂಗ್ ಯುವ ಸಂಘಟನೆಯ ಅಧ್ಯಕ್ಷ ಪ್ರವೀಣ ಗೋಸಬಾಳ, ಶಂಕರ ಮವೊಡ್ಡರ, ಶ್ರೀಶೈಲ ಕುಂಬಾರ, ಸಂಜು ಕೊಳವಿ, ಮಹೇಶ ಮುಚ್ಚಂಡಿಹಿರೇಮಠ, ಸತೀಶ ಕುಂಬಾರ, ಮಡಿವಾಳಪ್ಪ ಕುಂಬಾರ, ಸುರೇಶ ದೇವರ, ಸಚೀನ ಮೋಪಗಾರ, ಸುರೇಶ ಬಡೆಪ್ಪಗೋಳ, ರೋಹಿತ ಕುಂಬಾರ, ಮಾದೇವ ಶಿಂಧೆ, ಕೃಷ್ಣಾ ನಾವಿ ಸೇರಿದಂತೆ ಮುಂತಾದವರು ಇದ್ದರು.

 

Related posts: