ಗೋಕಾಕ:ದುರಾಸೆಯನ್ನು ತ್ಯಜಿಸಿ ಸನ್ಮಾರ್ಗದಲ್ಲಿ ಜೀವನ ಸಾಗಿಸಿ: ಶ್ರೀ ಬಸವರಾಜ ಶರಣರು
ದುರಾಸೆಯನ್ನು ತ್ಯಜಿಸಿ ಸನ್ಮಾರ್ಗದಲ್ಲಿ ಜೀವನ ಸಾಗಿಸಿ: ಶ್ರೀ ಬಸವರಾಜ ಶರಣರು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 18 :
ಸಾಧನೆಗೆ ಅರಿವೆ ಬೆಳಕಾಗಿದ್ದು, ಮಾನವನು ದುರಾಸೆಯನ್ನು ತ್ಯಜಿಸಿ ಸನ್ಮಾರ್ಗದಲ್ಲಿ ಜೀವನ ಸಾಗಿಸುವಂತೆ ಪೂಜ್ಯ ಶ್ರೀ ಬಸವರಾಜ ಶರಣರು ಹೇಳಿದರು.
ಸೋಮವಾರದಂದು ಸಾಯಂಕಾಲ ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಬಸವೇಶ್ವರ ಧರ್ಮ ಪ್ರಚಾರ ಸಂಸ್ಥೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಹಾಗೂ ಲಿಂಗಾಯತ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 153ನೇ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಅನೇಕ ಮೋಹಗಳಿಂದ ಬಂಧಿತನಾಗಿರುವ ವ್ಯಕ್ತಿ ದುರಾಸೆಯ , ದುಃಖದ ಬಲೆಯಲ್ಲಿ ಬಿದ್ದು ನರಳುತ್ತಿದ್ದಾನೆ . ಆಸೆಗಳಿಂದ ದೂರವಾಗಿ ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗಿ ಆನಂದದಿಂದ ಜೀವನ ಸಾಗಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಸಾಹಿತಿ ಸಾದಿಕ ಹಲ್ಯಾಳ ಅವರು ಬರೆದ ಮಾತೃಹೃದಯಿ ಹಾಗೂ ಜಲಪ್ರಳಯ ಗ್ರಂಥಗಳು ಸಾರ್ವಜನಿಕ ಗ್ರಂಥಾಲಯಕ್ಕೆ ಆಯ್ಕೆಯಾದ ಪ್ರಯುಕ್ತ ಶ್ರೀ ಮಠದಿಂದ ಅವರನ್ನು ಸತ್ಕರಿಸಿ , ಗೌರವಿಸಲಾಯಿತು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಶೂನ್ಯ ಸಂಪಾದನಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸನಗೌಡ ಪಾಟೀಲ ವಹಿಸಿದ್ದರು.
ವೇದಿಕೆಯ ಮೇಲೆ ಜಾನಪದ ತಜ್ಞ ಡಾ.ಸಿ.ಕೆ ನಾವಲಗಿ, ಶ್ರೀಮತಿ ಸುಮಿತ್ರಾ ಗುರಾಣಿ, ಪ್ರಸನ್ ತಂಬಾಕೆ, ನೀಲಕಂಠ ತೋಟಗಿ, ಅಭಿಷೇಕ ಮುಚ್ಚಂಡಿ ಹಿರೇಮಠ, ಮಲ್ಲಿಕಾರ್ಜುನ ಮಡ್ಡೇಣಿ, ಮಲ್ಲಪ್ಪ ನೇಸರಗಿ ಉಪಸ್ಥಿತರಿದ್ದರು.
ಆರ್.ಎಲ್.ಮಿರ್ಜಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಕೆ ಮಠದ ವಂದಿಸಿದರು.