ಗೋಕಾಕ:ನಾಯಕ ಸ್ಟುಡೆಂಟ್ ಫೆಡರೇಷನ್ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 100 ಕ್ಕೆ 100 ಫಲಿತಾಂಶ
ನಾಯಕ ಸ್ಟುಡೆಂಟ್ ಫೆಡರೇಷನ್ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ 100 ಕ್ಕೆ 100 ಫಲಿತಾಂಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 20 :
ನಗರದ ನಾಯಕ ಸ್ಟುಡೆಂಟ್ ಫೆಡರೇಷನ್ ವಸತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ತಿಂಗಳು ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ 100ಕ್ಕೆ 100 ರಷ್ಟು ಫಲಿತಾಂಶ ಪಡೆದು A ಶ್ರೇಣಿ ಯೊಂದಿಗೆ ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಬರೆದ ಎಲ್ಲಾ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿ ದಾಖಲೆ ನಿರ್ಮಿಸಿದ್ದಾರೆ. A + ಶ್ರೇಣಿಯೊಂದಿಗೆ 5 ವಿದ್ಯಾರ್ಥಿಗಳು, A ಶ್ರೇಣಿಯೊಂದಿಗೆ 30 ವಿದ್ಯಾರ್ಥಿಗಳು ಹಾಗೂ B+ ಶ್ರೇಣಿಯೊಂದಿಗೆ 6 ವಿದ್ಯಾರ್ಥಿಗಳು ಉರ್ತಿರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಈ ಸಾಧನೆಗೆ ಸಂಸ್ಥೆಯ ಚೇರಮನ್ ಶಾಸಕ ಸತೀಶ ಜಾರಕಿಹೊಳಿ, ಕಾರ್ಯದರ್ಶಿ ಎ.ಆರ್.ಪುಡಲಕಟ್ಟಿ, ಮುಖ್ಯೋಪಾಯ ಎ.ಜಿ.ಕೋಳಿ, ನಿಲಯ ಮೇಲ್ವಿಚಾರಕ ಪಿ.ಎಲ್.ಡೊಂಬಳ ಹಾಗೂ ಶಿಕ್ಷಕ ವೃಂದ ಹಾಗೂ ಪಾಲಕರು ಅಭಿನಂದಿಸಿದ್ದಾರೆ.