ಘಟಪ್ರಭಾ:ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ
ಧುಪದಾಳ ಗ್ರಾ.ಪಂ ಅಧ್ಯಕ್ಷ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ
ಘಟಪ್ರಭಾ ಸೆ 28: ಸ್ಥಳೀಯ ನಿವೃತ್ತ ಶಿಕ್ಷಕ ಹಾಗೂ ಧುಪದಾಳ ಗ್ರಾ.ಪಂ ಅಧ್ಯಕ್ಷರಾದ ಸತ್ಯಪ್ಪ ಬೆನವಾಡಿ ಅವರಿಗೆ “ಕರ್ನಾಟಕ ವಿಭೂಷಣ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ (ರಿ) ಬೆಂಗಳೂರ ಇವರ ಬೆಳ್ಳಿ ಹಬ್ಬ ಹಾಗೂ ಸರ್.ಎಂ.ವಿಶ್ವೇಶ್ವರಯ್ಯನವರ 156ನೇ ಜನ್ಮದಿನಾಚರಣೆ ನಿಮಿತ್ಯವಾಗಿ ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಕರ್ನಾಟಕ ಸರಕಾರ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರುಗಿದ ಕಾರ್ಯಕ್ರದಲ್ಲಿ ಅವರಿಗೆ ಸತ್ಕರಿಸಿ ಪ್ರಶಸ್ತಿ ನೀಡಿ ಗೌರವಿಲಾಯಿತು.
ಸತ್ಯಪ್ಪ ಬೆನವಾಡಿ ಅವರು ಶಿಕ್ಷಕರಾಗಿ ಮೂರ ದಶಕಗಳಕಾಲ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು, ಹಿರಿಯ ಉಚ್ಚನಾಯಾಲಯ ವಕೀಲರಾದ ಶಂಕರಪ್ಪನವರು, ಸಂಸದರಾದ ಬಿ.ಎನ್.ಚಂದ್ರಪ್ಪನವರು, ಚಲನಚಿತ್ರ ನಟಿ ಮೀನಾ ಸೇರಿದಂತೆ ಅನೇಕ ಗಣ್ಯರು ಇದ್ದರು.