RNI NO. KARKAN/2006/27779|Sunday, September 8, 2024
You are here: Home » breaking news » ಗೋಕಾಕ:ಲಯನ್ಸ್ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿ : ಮುರುಘರಾಜೇಂದ್ರ ಶ್ರೀ

ಗೋಕಾಕ:ಲಯನ್ಸ್ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿ : ಮುರುಘರಾಜೇಂದ್ರ ಶ್ರೀ 

ಲಯನ್ಸ್ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿ : ಮುರುಘರಾಜೇಂದ್ರ ಶ್ರೀ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :

 

ಅಂಧರ ಬಾಳಿಗೆ ಬೆಳಕನ್ನು ನೀಡುವ ನೇತ್ರದಾನದಂತಹ ಪವಿತ್ರ ಕಾರ್ಯವನ್ನು ಮಾಡುತ್ತಿರುವ ಇಲ್ಲಿನ ಲಯನ್ಸ್ ಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಸೋಮವಾರದಂದು ನಗರದ ಐಎಂಎ ಹಾಲ್ ನಲ್ಲಿ ಲಯನ್ಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಸಂಸ್ಥೆ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಮಾನವರಿಗೆ ಕಣ್ಣು ಅತಿ ಮುಖ್ಯವಾದ ಅಂಗವಾಗಿದೆ‌. ಅವುಗಳ ರಕ್ಷಣೆಗೆ ಸಂಸ್ಥೆಯು ಹಲವಾರು ಉಚಿತ ಶಸ್ತ್ರಚಿಕಿತ್ಸೆಗಳನ್ನು ನಿರಂತರವಾಗಿ ಮಾಡುತ್ತಿದೆ. ದಾನಿಗಳಿಂದ ನೇತ್ರಗಳನ್ನು ಪಡೆದು ದೃಷ್ಟಿಹೀನರಿಗೆ ದೃಷ್ಟಿಭಾಗ್ಯ ಕಲ್ಪಿಸುವ ಮೂಲಕ ಮಾನವೀಯತೆಯನ್ನು ಮೆರೆಯುತ್ತಿರುವ ಸಂಸ್ಥೆಗೆ ನಾವೆಲ್ಲರೂ ಸಹಕಾರ ನಿಡೋಣಾ ಎಂದರು.
ಇದೇ ಸಂದರ್ಭದಲ್ಲಿ ಲಯನ್ಸ್ ಸಂಸ್ಥೆ ಮತ್ತು ಲಯನ್ಸ್ ಸೇವಾ ಸಂಸ್ಥೆ ವತಿಯಿಂದ ನಗರದಲ್ಲಿ ಪ್ರಾರಂಭಿಸಿರುವ ಕಣ್ಣಿನ ಆಸ್ಪತ್ರೆಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬಟಕುರ್ಕಿ ಚೌಕಿಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಲಯನ್ಸ್ ಸಂಸ್ಥೆಯ ಜಿಲ್ಲಾ ಪ್ರಾಂಥಪಾಲರುಗಳಾದ ಶ್ರೀಕಾಂತ್ ಮೋರೆ,ಸುಗ್ಗಲಾ ಯಲಮಲಿ ,ಲಯನ್ಸ್ ಸಂಸ್ಥೆಯ ಅಧ್ಯಕ್ಷ ಡಾ‌.ಅಶೋಕ ಮುರಗೋಡ,ಲಯನ್ಸ್ ಸೇವಾ ಸಂಸ್ಥೆಯ ಅಧ್ಯಕ್ಷ ಗುರುದೇವ ಸಿದ್ದಾಪೂರಮಠ, ಶ್ರೀಶೈಲ ಹಂಜಿ, ಪಿ.ಸಿ. ಭಾಪನಾ, ಮಹೇಂದರ್ ಪೂರವಾಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: