RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆ : ಜಿ.ಇ.ಎಸ್ ಮಾಡರ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆ : ಜಿ.ಇ.ಎಸ್ ಮಾಡರ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ 

ಎಸ್.ಎಸ್.ಎಲ್.ಸಿ ಪರೀಕ್ಷೆ : ಜಿ.ಇ.ಎಸ್ ಮಾಡರ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮೇ 24 :

 
ಕಳೆದ ಏಪ್ರಿಲ್ ತಿಂಗಳು ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಜಿ.ಇ.ಎಸ್ ಮಾಡರ್ನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಸಾಧಿಸಿದ್ದಾರೆ.
ಪರೀಕ್ಷೆ ಹಾಜರಾದ 104 ವಿದ್ಯಾರ್ಥಿಗಳ ಪೈಕಿ 102 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿನೋದ ಎಂ ಪೂಜಾರ 625ಕ್ಕೆ 618 ಅಂಕ ( 98..8% ) ಪಡೆದು ಪ್ರಥಮ ಸ್ಥಾನ , ಭಾವನಾ ಜಡಿನವರ 625ಕ್ಕೆ 612 ಅಂಕ( 97.92%) ಪಡೆದು ದ್ವಿತೀಯ ಸ್ಥಾನ, ಸಹನಾ ಶೀಗಿಹೋಳಿ 625ಕ್ಕೆ 608 ಅಂಕ ( 97.28%) ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ.
ಒಟ್ಟು ಶಾಲೆ ಪ್ರತಿಷತ್ ಫಲಿತಾಂಶ 100ಕ್ಕೆ 98.07 % ಆಗಿದ್ದು A ಶ್ರೇಣಿ ಪಡೆದುಕೊಂಡಿದೆ.
ವಿದ್ಯಾರ್ಥಿಗಳು ಈ ಸಾಧನೆಗೆ ಸಂಸ್ಥೆಯ ಚೇರಮನ್ ವಿಶ್ವನಾಥ್ ಕಡಕೋಳ, ಡಾ‌.ಯು.ಬಿ.ಆಜರೆ,ಕಾರ್ಯದರ್ಶಿ ಆರ್.ಎಂ ವಾಲಿ, ಮುಖ್ಯೋಪಾಯರಾದ ಎಸ್.ಕೆ ಮಠದ , ಪ್ರಧಾನ ಗುರು ಎಂ.ಎಂ.ಸೋಗಲದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Related posts: