RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ

ಗೋಕಾಕ:ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ 

ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ : ಲಖನ್ ಜಾರಕಿಹೊಳಿ

ಗೋಕಾಕ ಸೆ 29: ಪ್ರತಿಯೊಬ್ಬ ಮನುಷ್ಯನಲ್ಲಿರುವ ಅಜ್ಞಾನದ ಅಂಧಕಾರ ಕಳೆದು, ಸುಜ್ಞಾನದ ಬೆಳಕು ನೀಡುವ ಶಕ್ತಿ ಆಧ್ಯಾತ್ಮಲ್ಲಿದೆ ಎಂದು ಇಲ್ಲಿಯ ಮಯೂರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಹಾಗೂ ಯುವ ಧುರೀಣ ಲಖನ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ನಗರದ ಸಬ್‍ಜೈಲ ಹಿಂಭಾಗದಲ್ಲಿರುವ ಶ್ರೀ ಕರೆಮ್ಮದೇವಿ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಕರೆಮ್ಮದೇವಿಗೆ ನಮಸ್ಕರಿಸಿ ಮಾತನಾಡಿದ ಅವರು, ನಮ್ಮ ಧರ್ಮ, ಸಂಸ್ಕಂತಿ ಉಳಿಯ ಬೇಕಾದರೇ ಇಂದಿನ ಯುವಜನಾಂಗ ಆಧ್ಯಾತ್ಮದ ಕಾರ್ಯಗಳಲ್ಲಿ ಪಾಲ್ಗೊಂಡು ದುಷ್ಚಟಗಳಿಗೆ ದಾಸರಾಗದೇ ಆರೋಗ್ಯವಂತ ಸಮಾಜವನ್ನು ನಿರ್ಮಿಸಬೇಕೆಂದರು.
ಈ ಸಂದರ್ಭದಲ್ಲಿ ಅಶೋಕ ಸಾಯನ್ನವರ, ಸದಾನಂದ ಕಲಾಲ, ನಗರ ಸಭೆಯ ಸದಸ್ಯ ಜಯಾನಂದ ಹುಣಶ್ಯಾಳ, ಗಿರೀಶ ಖೋತ, ವಿಶ್ವನಾಥ ಗಾಣಗೇರ, ಬಸವರಾಜ ಬರಗಿ, ವಿಲಾಸ ವಾಕುಡೆ, ವಿರುಪಾಕ್ಷೀ ಬರಗಿ, ಮೋಹನ ಅಯ್ಯಂಗಾರ, ಪ್ರದೀಪ ನಾಗನೂರ, ಬಾಬು ಬೇಡರಟ್ಟಿ ,  ಆನಂದ ಪಟ್ಟಣಶೆಟ್ಟಿ, ಸಂಜು ಮಾನಗಾಂವಿ ಸೇರಿದಂತೆ ಹಲವರು ಇದ್ದರು.

Related posts: