RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಪರಿಸರ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು : ರಾಜು ರಂಜನ್

ಗೋಕಾಕ:ಪರಿಸರ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು : ರಾಜು ರಂಜನ್ 

ಪರಿಸರ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು : ರಾಜು ರಂಜನ್

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 5 :

 
ಪರಿಸರ ವಿಲ್ಲದೆ ಮಾನವನ ಬದುಕು ಅಸಾಧ್ಯವಾಗಿದ್ದು, ಪರಿಸರ ರಕ್ಷಣೆಗೆ ಅರಣ್ಯ ಇಲಾಖೆಯೊಂದಿಗೆ ಎಲ್ಲರೂ ಕೈ ಜೋಡಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಜು ರಂಜನ್ ಹೇಳಿದರು.

ರವಿವಾರದಂದು ನಗರದ ಹೋರವಲಯದ ಕಡಬಗಟ್ಟಿ ಅರಣ್ಯ ವಲಯದಲ್ಲಿ ಗೋಕಾಕ ಪ್ರಾದೇಶಿಕ ಅರಣ್ಯ ವಲಯದಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಬೀಜ ಬಿತ್ತನೆ ಅಭಿಯಾನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು

ಮಾನವ ಬದುಕಲು ಅತಿ ಅವಶ್ಯಕವಾದ ಆಮ್ಲಜನಕ ಸಸ್ಯಗಳಿಂದಲೆ ದೊರೆಯುತ್ತದೆ. ಪರಿಸರ ಅಸಮತೋಲನವಾದರೆ ಪ್ರಕೃತಿ ವಿಕೋಪಗಳಾಗುತ್ತವೆ. ಇವುಗಳನ್ನು ತಡೆಯಲು ಅರಣ್ಯವನ್ನು ಉಳಿಸಿ ಬೆಳೆಸಬೇಕು. ಇಂದಿನ ಆಧುನಿಕತೆಯ ಜೀವನಕ್ಕಾಗಿ ಅರಣ್ಯ ನಾಶ ಮಾಡುವದನ್ನು ತಡೆಗಟ್ಟಬೇಕು.ಪರಿಸರ ರಕ್ಷಣೆಗಾಗಿ ಅರಣ್ಯ ಇಲಾಖೆಯು ಹಲವಾರು ಯೋಜನೆಗಳೊಂದಿಗೆ ಕಾರ್ಯಪ್ರವೃತ್ತವಾಗಿದೆ. ಪ್ರತಿಯೊಬ್ಬರೂ ಪರಿಸರ ರಕ್ಷಣೆಯ ಮಹತ್ವವನ್ನು ಅರಿತು ಸಸಿಗಳನ್ನು ನೆಡುವದರೊಂದಿಗೆ ಹಸಿರು ನಾಡನ್ನಾಗಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ ಶ್ರೀವಾಸ್ತವ , ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ಚವ್ಹಾಣ , ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅಂಥೋಣಿ ಮರಿಯಪ್ಪ , ಹರ್ಷಾ ಬಾನೆ, ಎಸ್.ಎಸ್.ಕಲ್ಲೋಳಕರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ಸುನೀತಾ ನಿಂಬರಗಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ, ಕೆಎಲ್ಇ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಅನುಪಾ ಕೌಶಿಕ್ ಉಪಸ್ಥಿತರಿದ್ದರು

Related posts: