RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಗೋಕಾಕ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ

ಗೋಕಾಕ:ಗೋಕಾಕ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ 

ಗೋಕಾಕ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 6 :

 
ಗೋಕಾಕ ಕೆ‌.ಎಸ್‍.ಆರ್ ಟಿ. ಸಿ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಸಾಯಂಕಾಲ ಬಸ್ಸು ಸೌಕರ್ಯ ನೀಡುವಂತೆ ಆಗ್ರಹಿಸಿ ಸ್ಥಳೀಯರು ರವಿವಾರದಂದು ಗೋಕಾಕ ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕರಿಗೆ ಮನವಿಯನ್ನು ಸಲ್ಲಿಸಿದರು.
ದಿನನಿತ್ಯ ಯಾದವಾಡ ಸೇರಿದಂತೆ ಹಲವು ಗ್ರಾಮಗಳಿಂದ ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನೌಕರರು ಸಂಜೆ ಯಾದವಾಡ ಗ್ರಾಮಕ್ಕೆ ತೆರಳಲು ಬಸ್ಸಿನ ಸೌಕರ್ಯ ಇರುವದಿಲ್ಲ. ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗೋಕಾಕ ಕೆ‌.ಎಸ್‍.ಆರ್ ಟಿ. ಸಿ ಡಿಪೋದಿಂದ ಯಾದವಾಡ ಗ್ರಾಮಕ್ಕೆ ಸಾಯಂಕಾಲ 4.30 ರಿಂದ 5 ಗಂಟೆಯವರೆಗೆ ಸರಿಯಾದ ಬಸ್ಸಿನ ಸೌಕರ್ಯ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನೌಕರರು ಸೇರಿದಂತೆ ಯಾದವಾಡಿ ಗ್ರಾಮಸ್ಥರು ಇತರರು ಇದ್ದರು.

Related posts: