ಗೋಕಾಕ:ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 139 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದ ನಿಖಿಲ್ ಪಾಟೀಲಗೆ ಸತ್ಕಾರ
ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 139 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದ ನಿಖಿಲ್ ಪಾಟೀಲಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 10 :
ಘಟಪ್ರಭಾ ಸಹಕಾರಿ ಸಕ್ಕರೆ ಕಾರಖಾನೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಯವರು ಕಾರಖಾನೆಯ ಕಾರ್ಮಿಕ ಕಲ್ಯಾಣಾಧಿಕಾರಿ ಬಸವರಾಜ ಪಾಟೀಲ ಅವರ ಪುತ್ರ ನಿಖಿಲ್ ಪಾಟೀಲ ಅವರು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ 139 ಹಾಗೂ ರಾಜ್ಯಕ್ಕೆ 4ನೇ ಸ್ಥಾನ ಪಡೆದು ಉರ್ತಿರ್ಣರಾದ ಪ್ರಯುಕ್ತ ಅವರನ್ನು ಹಾಗೂ ನೂತನವಾಗಿ ನೇಮಕಗೊಂಡ ನಿರ್ದೇಶಕ ಜಗದೀಶ್ ಬಂಡ್ರೋ಼ಳಿ ಅವರನ್ನು ಸತ್ಕರಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾರಖಾನೆಯ ಅಧ್ಯಕ್ಷ ಅಶೋಕ ಪಾಟೀಲ, ರಾಮಣ್ಣ ಮಹಾರೆಡ್ಡಿ , ಬಸನಗೌಡ ಪಾಟೀಲ, ಲಕ್ಕಪ್ಪ ಗಣಪ್ಪಗೋಳ, ಮಲ್ಲಿಕಾರ್ಜುನ ಕಬ್ಬೂರ, ಶಿವಲಿಂಗಪ್ಪ ಪೂಜೇರಿ, ಸಿದ್ದಲಿಂಗಪ್ಪ ಕಂಬಳಿ,ಮಾಳಪ್ಪ ಜಾಗನೂರ, ಭೂತಪ್ಪ ಗೊಡೇರ, ಮಹಾದೇವಪ್ಪ ಭೋವಿ, ಶ್ರೀಮತಿ ಯಲ್ಲವ್ವ ಸಾರಾಪೂರ ,ಶ್ರೀಮತಿ ಲಕ್ಕವ್ವ ಬೆಳಗಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.