ಗೋಕಾಕ:ಕಠಿಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಯತ್ನ ಶೀಲರಾಗಿ : ನಿಖಿಲ್ ಪಾಟೀಲ
ಕಠಿಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರಯತ್ನ ಶೀಲರಾಗಿ : ನಿಖಿಲ್ ಪಾಟೀಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 11 :
ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮದಿಂದ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನ ಶೀಲರಾದರೆ ಯಶಸ್ಸು ನಿಶ್ಚಿತ ಎಂದು ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ದೇಶಕ್ಕೆ 139 ಸ್ಥಾನ ಪಡೆದ ನಿಖಿಲ್ ಪಾಟೀಲ ಹೇಳಿದರು.
ಶನಿವಾರದಂದು ನಗರದ ಮಯೂರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ವೃಂದದವರು ಮಯೂರ ಶಾಲೆಯ ವಿದ್ಯಾರ್ಥಿಣ
ನಿಖಿಲ್ ಪಾಟೀಲ ಇವರ ಸಾಧನೆಯನ್ನು ಗುರುತಿಸಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ವಿದ್ಯಾರ್ಥಿಗಳು ಆತ್ಮ ವಿಶ್ವಾಸದಿಂದ ಅಧ್ಯಯನ ಶೀಲರಾದರೆ ಎಂತಹ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸ ಬಹುದು. ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಪ್ರಾರಂಭ ಹಂತದಲ್ಲೆ ಭದ್ರ ಬೂನಾದಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಸದುಪಯೋಗ ಪಡೆಸಿಕೊಳ್ಳಿ. ಉನ್ನತ ಕನಸಿನೊಂದಿಗೆ ಅದನ್ನು ನನಸಾಗಿಸಲು ಶಿಸ್ತು ಏಕಾಗ್ರತೆಯಿಂದ ಕಾರ್ಯಪ್ರವೃತ್ತರಾಗಿ, ಉನ್ನತ ಸ್ಥಾನ ಅಲಂಕರಸುವಂತೆ ಸಲಹೆ ನೀಡಿದರು.
ವೇದಿಕೆಯ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ, ಶಿಕ್ಷಣ ಸಮನ್ವಯ ಅಧಿಕಾರಿ ಎಂ.ಬಿ.ಪಾಟೀಲ, ಶಿಕ್ಷಕ ಎಂ.ಸಿ.ವಣ್ಣೂರ, ಬಸವರಾಜ ಪಾಟೀಲ ಇದ್ದರು.