RNI NO. KARKAN/2006/27779|Monday, November 25, 2024
You are here: Home » breaking news » ಕೌಜಲಗಿ:ಶ್ರೀಕೃಷ್ಣ ಪಾರಿಜಾತ ಆಧ್ಯಾತ್ಮದ ಅಮೃತವಾಗಿದೆ: ಜಯಾನಂದ ಮಾದರ

ಕೌಜಲಗಿ:ಶ್ರೀಕೃಷ್ಣ ಪಾರಿಜಾತ ಆಧ್ಯಾತ್ಮದ ಅಮೃತವಾಗಿದೆ: ಜಯಾನಂದ ಮಾದರ 

ಶ್ರೀಕೃಷ್ಣ ಪಾರಿಜಾತ ಆಧ್ಯಾತ್ಮದ ಅಮೃತವಾಗಿದೆ: ಜಯಾನಂದ ಮಾದರ

 
ನಮ್ಮ ಬೆಳಗಾವಿ ಇ – ವಾರ್ತೆ, ಕೌಜಲಗಿ ಜೂ 12 :

 
ಕರ್ನಾಟಕ ಜನಪದ ಕಲೆಗೆ ಕೃಷ್ಣ ಪಾರಿಜಾತ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡಿದ್ದು, ಕೃಷ್ಣ ಪಾರಿಜಾತ ಆಧ್ಯಾತ್ಮದ ಅಮೃತವಾಗಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಅಭಿಪ್ರಾಯಿಸಿದರು.
ಸಮೀಪದ ಕುಲಗೋಡ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬಲಭೀಮ ದೇವರ ಓಕಳಿ ಅಂಗವಾಗಿ ಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನ ಮತ್ತು ಗೋಕಾಕದ ಈಶ್ವರಚಂದ್ರ ಬೆಟಗೇರಿ ಅವರ ಸಂಪಾದಿತ ಕೃಷ್ಣ ಪಾರಿಜಾತ ರಂಗಪ್ರಯೋಗ ಕೃತಿ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕುಲಗೋಡ ಗ್ರಾಮದ ತಮ್ಮಣ್ಣಾಚಾರ್ಯ ಕುಲಕರ್ಣಿಯವರು ರಚಿಸಿ ರಂಗ ಪ್ರಯೋಗ ಮಾಡಿದ ಬೈಲಾಟ ಕೃತಿಯನ್ನು ಗೋಕಾಕದ ಕವಿ-ಕಲಾವಿದ ಈಶ್ವರಚಂದ್ರ ಬೆಟಗೇರಿಯವರು ಸಂಪಾದಿಸಿದ್ದಾರೆ. ಸುಮಾರು 556 ಪುಟಗಳ ಈ ಸಂಪಾದನಾ ಕೃತಿಯನ್ನು ಬೆಂಗಳೂರಿನ ಆರ್.ಶ್ರೀನಿವಾಸ ಅವರು ಪ್ರಕಟಿಸಿರುವುದು ಉತ್ತರ ಕರ್ನಾಟಕ ಜಾನಪದ ಕ್ಷೇತ್ರಕ್ಕೆ ಸಂದ ಅಪೂರ್ವ ಗೌರವ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ಪಾರಿಜಾತದ ಸರ್ವ ಕಲಾವಿದರನ್ನು ಶಾಲು-ಮಾಲೆಗಳೊಂದಿಗೆ ಸತ್ಕರಿಸಲಾಯಿತು.
ಕೌಜಲಗಿ ನಿಂಗಮ್ಮ ಪ್ರತಿಷ್ಠಾನದ ಅಧ್ಯಕ್ಷ ಸುಭಾಸ ಭೀಮಪ್ಪ ಕೌಜಲಗಿ, ಪ್ರಕಾಶ ಕೋಟಿನತೋಟ, ಡಾ. ರಾಜು ಕಂಬಾರ, ಭೀಮಪ್ಪ ರಾಮಪ್ಪ ಪೂಜೇರ, ದಾದನಟ್ಟಿಯ ಮಲ್ಲಿಕಾರ್ಜುನ ಮುದಕವಿ ಹಾಗೂ ಕುಲಿಗೋಡದ ಗುರುಹಿರಿಯರು ಉಪಸ್ಥಿತರಿದ್ದರು.

Related posts: