RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಪ್ರಕಾಶ ಹುಕ್ಕೇರಿಯವರ ಗೆಲುವು ಸುಲಭವಾಗಲಿದೆ : ಅಶೋಕ್ ಪೂಜಾರಿ ವಿಶ್ವಾಸ

ಗೋಕಾಕ:ಪ್ರಕಾಶ ಹುಕ್ಕೇರಿಯವರ ಗೆಲುವು ಸುಲಭವಾಗಲಿದೆ : ಅಶೋಕ್ ಪೂಜಾರಿ ವಿಶ್ವಾಸ 

ಪ್ರಕಾಶ ಹುಕ್ಕೇರಿಯವರ ಗೆಲುವು ಸುಲಭವಾಗಲಿದೆ : ಅಶೋಕ್ ಪೂಜಾರಿ ವಿಶ್ವಾಸ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 13:

 
ಪ್ರಕಾಶ ಹುಕ್ಕೇರಿಯವರು ಹಿರಿಯರಿದ್ದರೂ ಸಹ ಮತದಾರರು ಅವರ ಪರವಾಗಿ ಒಲವು ತೋರಿಸುತ್ತಿದ್ದಾರೆ ಹಾಗಾಗಿ ಅವರ ಗೆಲುವು ಸುಲಭವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರದಂದು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪ್ರಕಾಶ ಹುಕ್ಕೇರಿ ಅವರು ಸಾಕಷ್ಟು ಅನುಭವ ಹೊಂದಿದವರು ಅವರ ಗೆಲುವು ಸುಲಭವಾಗಲಿದ್ದು, ಚುನಾವಣೆ ಸ್ವರ್ಧೆಗೆ ವಯಸ್ಸು ಹಾಗೂ ಪದವಿ ಮಾನದಂಡವಲ್ಲ ಎಂದು ಕಾನೂನು ಹೇಳಿದೆ ಆ ಪ್ರಕಾರ ಪ್ರಕಾಶ ಹುಕ್ಕೇರಿ ಅವರು ಸ್ವರ್ಧೆ ಮಾಡಿದ್ದಾರೆ.
ರಾಜಕೀಯ ಪಕ್ಷದವರ ಏನೆ ಒಪ್ಪಂದಗಳು ಮಾಡಿಕೊಂಡರು ಸಹ ಈ ಚುನಾವಣೆಯಲ್ಲಿ ಮತದಾರರ ಪ್ರಭುದ್ದ ಮತದಾರರಿದ್ದಾರೆ ಅವರಿಗೆ ಯಾರನ್ನು ಗೆಲ್ಲಿಸಬೇಕು ಎಂದು ಗೊತ್ತಿರುವದರಿಂದ ಯಾವ ಕಾರ್ಯತಂತ್ರಗಳು ಇಲ್ಲಿ ಫಲಿ‌ಸುವದಿಲ್ಲ, ಈ ಚುನಾವಣೆ ಸೀಮಿತ ಮತದಾರರ ಇರುವದರಿಂದ ಈ ಚುನಾವಣೆ ಮುಂದಿನ ಯಾವುದೇ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ ಎಂದ ಅವರು ಕಾಂಗ್ರೆಸ್ ಪಕ್ಷದ ಪರವಾಗಿ ವಾತಾವರಣ ಇರುವದರಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಎರೆಡು ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಅಶೋಕ್ ಪೂಜಾರಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

Related posts: