ಗೋಕಾಕ:ಸಮಾಜ ಭಾಂಧವರು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು : ಟಿ.ಆರ್.ಕಾಗಲ
ಸಮಾಜ ಭಾಂಧವರು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು : ಟಿ.ಆರ್.ಕಾಗಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 13 :
ಪ್ರಯತ್ನವಾದಿಗಳ ವಂಶದಲ್ಲಿ ಹುಟ್ಟಿರುವ ನಾವುಗಳು ಪ್ರಯತ್ನದೊಂದಿಗೆ ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಬೇಕಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಟಿ.ಆರ್.ಕಾಗಲ ಹೇಳಿದರು.
ಸೋಮವಾರದಂದು ತಾಲೂಕಿನ ಉಪ್ಪಾರಹಟ್ಟಿ ಗ್ರಾಮದಲ್ಲಿ ರಾಜಋಷಿ ಶ್ರೀ ಭಗೀರಥ ಮಹರ್ಷಿಯ ಮೂರ್ತಿ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಯತ್ನಕ್ಕೆ ಮತ್ತೊಂದು ಹೆಸರು ಭಗೀರಥ. ಸಂಘಟಿತರಾಗಿ ಕಠಿಣ ಪರಿಶ್ರಮ ವಹಿಸಿದಾಗ ಮಾತ್ರ ಸಮಾಜ ಏಳ್ಗೆಯಾಗಲು ಸಾಧ್ಯವಿದೆ ಎಂದು ತಿಳಿಸಿದರು.
ಶ್ರೀ ಭಗೀರಥ ಮಹರ್ಷಿಯ ಮೂರ್ತಿಯನ್ನು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಲೋಕಾರ್ಪಣೆಗೊಳಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಗ್ರಾಮದ ಮುಖಂಡರು ಅಂಬಿರಾವ ಪಾಟೀಲ ಅವರನ್ನು ಸತ್ಕರಿಸಿದರು.
ಮುಮ್ಮಟಗಿರಿಯ ಶ್ರೀ ಆತ್ಮಾನಂದ ಸ್ವಾಮಿಜಿ, ತಿಗಡಿಯ ಶ್ರೀ ಶಂಕರಾನಂದ ಸ್ವಾಮಿಜಿ, ಉಪ್ಪಾರಹಟ್ಟಿ ಶ್ರೀ ಸಿದ್ಧಾರೂಢ ಮಠದ ಶ್ರೀ ನಾಗೇಶ್ವರ ಸ್ವಾಮಿಜಿಗಳು ಕಾರ್ಯಕ್ರಮ ದಿವ್ಯ ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಮಡ್ಡೆಪ್ಪ ತೋಳಿನವರ, ಎಪಿಎಮ್‍ಸಿ ಮಾಜಿ ಅಧ್ಯಕ್ಷ ಅಡಿವೆಪ್ಪ ಕಿತ್ತೂರ, ಕರವೇ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ, ನ್ಯಾಯವಾದಿ ಶಂಕರ ಧರೆನ್ನವರ, ಮುಖಂಡರಾದ ಮಾಯಪ್ಪ ತಹಶೀಲದಾರ, ಮಲ್ಲಪ್ಪ ಕಮತಿ, ಹಣಮಂತ ದುರ್ಗನ್ನವರ, ಮಲ್ಲಪ್ಪ ಕೌಜಲಗಿ, ರಮೇಶ ಬಂಡಿ, ಸಿದ್ದಪ್ಪ ಬಂಡಿ, ಉಪ್ಪಾರಹಟ್ಟಿ ಗ್ರಾಮದ ಪಿಕೆಪಿಎಸ್ ಮತ್ತು ಗ್ರಾ.ಪಂ ಸದಸ್ಯರು, ಹಿರಿಯರು ಮುಖಂಡರು ಇದ್ದರು.