RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರ ವಾಗಿರಬೇಕು : ಬಿಇಒ ಬಳಗಾರ ಸಲಹೆ

ಗೋಕಾಕ:ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರ ವಾಗಿರಬೇಕು : ಬಿಇಒ ಬಳಗಾರ ಸಲಹೆ 

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರ ವಾಗಿರಬೇಕು : ಬಿಇಒ ಬಳಗಾರ ಸಲಹೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 18 :

 

ಶಿಕ್ಷಕರು ಸಮೃದ್ಧವಾಗಿದ್ದರೆ ಒಳ್ಳೆಯ ಶೈಕ್ಷಣಿಕ ವಾತಾವರಣ ನಿರ್ಮಾಣವಾಗಿ ಮಕ್ಕಳ ಕಲಿಕಾ ಮೌಲ್ಯ ಹೆಚ್ಚಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.

ತಾಲೂಕಿನ ಮರಡಿಮಠ ಗ್ರಾಮದ ಸರಕಾರಿ ಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ , ಸಾರ್ವಜನಿಕ ಶಿಕ್ಷಣ ಇಲಾಖೆ ಚಿಕ್ಕೋಡಿ , ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಗೋಕಾಕ ಹಾಗೂ ಕೊಣ್ಣೂರ, ಶಿವಾಪೂರ, ಧುಪದಾಳ ಸಮೂಹ ಸಂಪನ್ಮೂಲ ಕೇಂದ್ರಗಳ ಸಹಯೋಗದಲ್ಲಿ ಹಮ್ಮಿಕೊಂಡ ಗುರು ಸ್ವಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು, ಶಿಕ್ಷಕರ ಓದುವ ಪ್ರಕ್ರಿಯೆ ನಿರಂತರ ವಾಗಿರಬೇಕು.ಶಿಕ್ಷಕರ ಕಾರ್ಯ ಉತ್ತೇಜನಕಾರಿಯಾಗಿರಬೇಕು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ತಾಲ್ಲೂಕಿಗೆ ಉತ್ತಮ ಹೆಸರು ತರಬೇಕು. ಶಿಕ್ಷಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಗುರು ಸ್ಪಂದನಾ ಕಾರ್ಯಕ್ರಮ ಉತ್ತಮ ಕಾರ್ಯ ಕ್ರಮವಾಗಿದೆ.  ಶಿಕ್ಷಣದ ಸೇವಾ ಪುಸ್ತಕದಲ್ಲಿ ಏನಾದರೂ ತಪ್ಪು ಗಳಿದ್ದಲ್ಲಿ, ಅದನ್ನು ಬಗೆರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಸಹಕಾರಿಯಾಗಿದ್ದು, ಶಿಕ್ಷಕರ ಸಮಸ್ಯೆಗೆಗಳಿಗೆ ಸ್ವಂದಿಸುವ ಮೂಲಕ ಗುರುಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕೊಡುವ ಕಾರ್ಯ ನಿಜಕ್ಕೂ ಮೆಚ್ಚುವಂತಹದ್ದು, ಜನಪ್ರತಿನಿಧಿಗಳು ಮತ್ತು ಸಿಬ್ಬಂದಿಗಳ ಸಹಕಾರದಿಂದ ಗೋಕಾಕ ವಲಯದ ಶಿಕ್ಷಕರ ಬಹುತೇಕ ಸಮಸ್ಯೆಗಳು ಸೂಕ್ತ ಪರಿಹಾರ ತೊರೆತ್ತಿದೆ. ಮುಂದೆ ವಲಯದ ಶಾಲೆ ಹಾಗೂ ಶಿಕ್ಷಕರ ಯಾವುದೇ ಸಮಸ್ಯೆ ಹಾಗೂ ಬೇಡಿಕೆಗಳಿಗೆ ಹಂತಹಂತವಾಗಿ   ಸ್ಪಂದಿಸುವ ಕಾರ್ಯ ಮಾಡುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮವನ್ನು ಹಿರಿಯ ಪುರಸಭೆ ಮಾಜಿ ಅಧ್ಯಕ್ಷ ಸದಸ್ಯ ಪ್ರಕಾಶ ಕರನಿಂಗ್ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಗೋಕಾಕ ನಗರದ ಶಿವಾ ಪೌಂಡೇಶನ್ ನ ವಿದ್ಯಾರ್ಥಿಗಳು ಕರಾಟೆಯಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಪ್ರಯುಕ್ತ ಅವರನ್ನು ಹಾಗೂ ಮಗ್ಗಿ – ಸುಗ್ಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಗ್ಗಿ ಮಹಾರಾಜ ಮತ್ತು ಮಗ್ಗಿ ಮಹಾರಾಣಿ ಎಂದು ಆಯ್ಕೆಯಾದ ಕೊಣ್ಣೂರ, ಶಿವಾಪೂರ ಮತ್ತು ಧುಪದಾಳ ಸಮೂಹ ಸಂಪನ್ಮೂಲದ ವಿದ್ಯಾರ್ಥಿ/ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಕೊಣ್ಣೂರ ಪುರಸಭೆ ಅಧ್ಯಕ್ಷೆ ಶ್ರೀಮತಿ ಮಂಗಲಾ ತೇಲಿ, ಉಪಾಧ್ಯಕ್ಷ ಅಶೋಕ ಕುಮಾರ್ ನಾಯಕ, ಕ್ಷೇತ್ರ ಸಮನ್ವಯ ಅಧಿಕಾರಿ ಎಂ.ಬಿ.ಪಾಟೀಲ, ಬಿಸಿಯೂಟ ಅಧಿಕಾರಿ ಅಶೋಕ ಮಲಬನ್ನವರ , ಸಿದ್ದಣ್ಣ ಲೋಕನ್ನವರ, ಜಿ.ಆರ್.ಸನದಿ, ಎಲ್.ಕೆ ತೋರಣಗಟ್ಟಿ, ಶ್ರೀಮತಿ ಯಮನೂರ ಬಾಗ್ಯನ್ನವರ, ಬಿ.ಎಂ ವಣ್ಣೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related posts: