ಗೋಕಾಕ:ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮ ಯಶಸ್ವಿಗೊಳಿಸಿ : ಡಾ.ರಾಜೇಂದ್ರ ಸಣ್ಣಕ್ಕಿ
ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮ ಯಶಸ್ವಿಗೊಳಿಸಿ : ಡಾ.ರಾಜೇಂದ್ರ ಸಣ್ಣಕ್ಕಿ
ನಮ್ಮ ಬೆಳಗಾವಿ ಇ – ವಾರ್ತೆ, ಜೂ 21 :
ಜುಲೈ 13 ರಂದು ನಡೆಯುವ ಕಾಗಿನೆಲೆ ಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಗುರುವಂದನ ಕಾರ್ಯಕ್ರಮದ ಜವಾಬ್ದಾರಿ ಈ ಬಾರಿ ಬೆಳಗಾವಿ ಜಿಲ್ಲೆಯ ಸಮಾಜ ಬಾಂಧವರ ಮೇಲಿದ್ದು, ಅದನ್ನು ಯಶಸ್ವಿ ಮಾಡಬೇಕೆಂದು ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಸೋಮವಾರದಂದು ನಗರದ ಭೀರೇಶ್ವರ ಸಭಾಂಗಣದಲ್ಲಿ ನಡೆದ ತಾಲೂಕು ಹಾಲುಮತ ಸಮುದಾಯ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು
ಗುರುವಂದನೆ ಕಾರ್ಯಕ್ರಮವು ಪ್ರತಿವರ್ಷ ಒಂದೊಂದು ಜಿಲ್ಲೆಯ ಸಮಾಜ ಬಾಂಧವರು ನಡೆಸುವ ಪದ್ದತಿಯಂತೆ ಈ ಬಾರಿ ಈ ಅವಕಾಶ ಬೆಳಗಾವಿ ಜಿಲ್ಲೆಗೆ ದೊರೆತ್ತಿದೆ. ಸಮಾಜ ಬಾಂಧವರು ತನು,ಮನ,ಧನದಿಂದ ಸಹಕಾರ ನೀಡಿ ಜುಲೈ 13 ರಂದು ಕಾಗಿನೆಲೆಯಲ್ಲಿ ನಡೆಯುವ ಗುರುವಂದನೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ಸಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಸಿದ್ದಲಿಂಗಯ ದಳವಾಯಿ, ಮಡ್ಡೆಪ್ಪ ತೋಳಿನವರ, ಅರವಿಂದ್ ದಳವಾಯಿ, ಟಿ.ಬಿ.ತುರಾಯಿದಾರ, ಲಕ್ಷ್ಮಣ ಮುಸ್ಸಗುಪ್ಪಿ, ಶ್ರೀಪತಿ ಗಣೇಶವಾಡಿ, ಲಕ್ಷ್ಮಣ ಗಣಪ್ಪಗೋಳ,ಬೀರಪ್ಪ ಡಬಾಜ, ವಿಠಲ ಪಾಟೀಲ, ವ್ಹಿ.ಎ ಚಂದರಗಿ, ಸುರೇಶ್ ಸನದಿ , ಲಕ್ಕಪ್ಪ ಮಾಳಗಿ, ಮಲ್ಲಿಕಾರ್ಜುನ ಒಡೆಯರ, ನಾಗಪ್ಪ ಮಂಗಿ, ಅಡಿವೆಪ್ಪ ಅಳಗೋಡಿ, ಭೀಮಶಿ ಅಳಗೋಡಿ, ಸುನಿಲ್ ಎತ್ತಿನಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.