RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಜಗತ್ತಿಗೆ ಯೋಗದಂತಹ ಅನನ್ಯ ಕೊಡುಗೆಯನ್ನು ಭಾರತ ದೇಶ ನೀಡಿದೆ : ನಾರಾಯಣ ಮಠಾಧೀಕಾರಿ

ಗೋಕಾಕ:ಜಗತ್ತಿಗೆ ಯೋಗದಂತಹ ಅನನ್ಯ ಕೊಡುಗೆಯನ್ನು ಭಾರತ ದೇಶ ನೀಡಿದೆ : ನಾರಾಯಣ ಮಠಾಧೀಕಾರಿ 

ಜಗತ್ತಿಗೆ ಯೋಗದಂತಹ ಅನನ್ಯ ಕೊಡುಗೆಯನ್ನು ಭಾರತ ದೇಶ ನೀಡಿದೆ : ನಾರಾಯಣ ಮಠಾಧೀಕಾರಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 21 :

ಜಗತ್ತಿಗೆ ಯೋಗದಂತಹ ಅನನ್ಯ ಕೊಡುಗೆಯನ್ನು ಭಾರತ ದೇಶ ನೀಡಿದೆ ಎಂದು ವಿಶ್ವ ಹಿಂದೂ ಪರಿಷತ್ ನ ವಿಭಾಗೀಯ ಸಂಚಾಲಕ ನಾರಾಯಣ ಮಠಾಧೀಕಾರಿ ಹೇಳಿದರು.

ಮಂಗಳವಾರದಂದು ನಗರದ ಮಯೂರ ಶಾಲಾ ಆವರಣದಲ್ಲಿ ತಾಲೂಕಾಡಳಿಡ, ತಾಲೂಕು ಕಾನೂನು ಸೇವೆಗಳ ಸಮಿತಿ , ನಗರಸಭೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಮಾನವ ಹಕ್ಕುಗಳ ಆಯೋಗ, ಪತಜಂಲಿ ಯೋಗ ಸಮಿತಿ, ಆರೋಗ್ಯ ಭಾರತಿ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಹಿಂದೂ ಜಾಗರಣೆ ವೇದಿಕೆ, ಜೆ.ಸಿ.ಐ , ರೋಟರಿ, ಲಯನ್ಸ ಸಂಸ್ಥೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ , ನ್ಯಾಯವಾದಿಗಳ ಸಂಘ, ಪತ್ರಕರ್ತರ ಸಂಘ, ಐಎನ್ಎ, ಬನಶಂಕರಿ ಮಹಿಳಾ ವೇದಿಕೆ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 8 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ನಮ್ಮ ಪೂರ್ವಜರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಿದ್ದಾರೆ. ಯೋಗದಿಂದ ನಿರೋಗಿಗಳಾಗಿ ಬದುಕು ಬಹುದು ಎಲ್ಲರೂ ಯೋಗವನ್ನು ಮಾಡುವದರೊಂದಿಗೆ ರೋಗ ರಹಿತ ಬದುಕನ್ನು ಬದುಕುವಂತೆ ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣ್ಣಚ್ಯಾಳಿ, ನ್ಯಾಯಾಧೀಶರಾದ ರಾಜೀವ ಬೋಳಾಪೂರ, ಸಿ.ಡಿ.ಹುಕ್ಕೇರಿ, ಯೋಗಗುರು ನಿಜಲಿಂಗ ದಡ್ಡಿಮನಿ, ಸುನೀತಾ ಅಕ್ಕಾ, ಪೌರಾಯುಕ್ತ ಶಿವಾನಂದ ಹಿರೇಮಠ, ಎಂ.ಬಿ.ಪಾಟೀಲ, ಸಿ.ಬಿ.ಪಾಗದ್, ರಮೇಶ್ ಪಟ್ಟಗುಂಡಿ ಸೇರಿದಂತೆ ಅನೇಕರು ಇದ್ದರು.

Related posts: