RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ನಗರದಲ್ಲಿ ರೈನ್‍ಬೋ ಎಕ್ಸಿಬಿಷನ್‍ ಲಂಡನ್ ಬ್ರಿಜ್, ಮಲೇಷ್ಯಾ ಟಾವರ್ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕ್ ಆರಂಭ

ಗೋಕಾಕ:ನಗರದಲ್ಲಿ ರೈನ್‍ಬೋ ಎಕ್ಸಿಬಿಷನ್‍ ಲಂಡನ್ ಬ್ರಿಜ್, ಮಲೇಷ್ಯಾ ಟಾವರ್ ಸೆಟ್ ಅಮ್ಯೂಜ್‍ಮೆಂಟ್ ಪಾರ್ಕ್ ಆರಂಭ 

ನಗರದಲ್ಲಿ ರೈನ್‍ಬೋ ಎಕ್ಸಿಬಿಷನ್‍ ಲಂಡನ್ ಬ್ರಿಜ್, ಮಲೇಷ್ಯಾ ಟಾವರ್  ಸೆಟ್ ಅಮ್ಯೂಜ್‍ಮೆಂಟ್ ಪಾರ್ಕ್ ಆರಂ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 22 :

ಮಲೇಷ್ಯಾ ಟಾವರ್

ನಗರದಲ್ಲಿ ಪ್ರಪ್ರಥಮ ಬಾರಿಗೆ ಉಡುಪಿಯ ರೈನಬೋ ಎಕ್ಸಿಬಿಷನ್ ಇವರಿಂದ ರೈನಬೋ ಎಕ್ಸಿಬಿಷನ್ ಅಮ್ಯೂಜಮೆಂಟ್ ಪಾರ್ಕ್ ಮತ್ತು ವಸ್ತು ಪ್ರದರ್ಶನ ಇಲ್ಲಿನ ತಂಬಾಕಿಯವರ ಜಾಗೆಯಲ್ಲಿ ಶುಕ್ರವಾರ ದಿನಾಂಕ 24 ರಿಂದ 60 ದಿನಗಳ ಕಾಲ  ಸಂಜೆ 5:30 ರಿಂಜ ರಾತ್ರಿ 9:30 ರವರೆಗೆ ಜರುಗಲಿದೆ ಎಂದು ರೈನಬೋ ಎಕ್ಸಿಬಿಷನ್ ನ ಮ್ಯಾನೇಜರ್ ಅಮಿತ್ ನಲವಗಿ ಹೇಳಿದರು.
ಬುಧವಾರದಂದು ನಗರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಾರ್ಕ್ ಒಳಗಡೆ  ಪ್ರೇಕ್ಷಕರನ್ನು ಆಕರ್ಷಕಿಸಲು ಲಂಡನ್ ಬ್ರಿಜ್ ಮಾದರಿಯ ಬ್ರಿಜ್ ಮತ್ತು ಮಲೇಷ್ಯಾ ಟಾವರನ್ನು  ಸೇರಿದಂತೆ ಅನೇಕ ಆಕರ್ಷಕಣೆಗಳನ್ನು  ನಿರ್ಮಿಸಲಾಗಿದೆ. ಲಂಡನ್ ಬ್ರೀಜ್  ಮತ್ತು ಮಲೇಷ್ಯಾ ಟಾವರ್ ಸೇರಿದಂತೆ ವಿವಿಧ ದೃಶ್ಯಗಳ  ಸೆಟ್ ಒಳಗೊಂಡ ಮನರಂಜನಾ ಪಾರ್ಕ್ ಇದಾಗಿದ್ದು, ಇದರ ಜೊತೆಗೆ ಮಕ್ಕಳಿಗೆ, ಮಹಿಳೆಯರಿಗೆ ವಿವಿಧ ಆಟೋಟಗಳನ್ನು ಆಡಲು ಅನುಕೂಲವಾಗುವಂತೆ ಜಾಯಿಂಟ್ ವ್ಹೀಲ್, ಕೊಲಂಬಸ್, ಡ್ರಾಗನ್ ಟ್ರೈನ್, ಸೂಲಂಬೋ,ಬ್ರೇಕ್ ಡ್ಯಾನ್ಸ್, ಪೆಡಲ್ ಬೋಟ್,ಜಲ್ಲಿಕಟ್ಟು, ಜಂಪಿಂಗ್, ಮಿನಿಟ್ರೈನ್ ಇದ್ದು, ಇದರ ಜೊತೆಗೆ ಸಾಹಸ ಮನರಂಜನೆ ವಿಭಾಗದಲ್ಲಿ ಒಂದೇ ಬಾವಿಯಲ್ಲಿ ಮಾರುತಿ ಕಾರು, ಮೋಟಾರು ಬೈಕ್‍ಗಳು ಒಟ್ಟಿಗೆ ಚಲಿಸುವ ಸಾಹಸ  ದೃಶ್ಯಗಳಿವೆ. ಲಂಡನ್ ಬ್ರೀಜ್  ಸೆಟ್ ಅಮ್ಯೂಜ್‍ಮೆಂಟ್ ಪಾರ್ಕ್  ನೋಡಲು ಬರುವ ಗ್ರಾಹಕರಿಗಾಗಿ ಗೃಹ ಬಳಕೆಯ ವಸ್ತುಗಳು, ಉಪಕರಣಗಳು,ಮಕ್ಕಳ ಆಟದ ಸಾಮಗ್ರಿಗಳು,ಅಡುಗೆ ಸಾಮಗ್ರಿಗಳು,ರೆಡಿಮೆಟ್ ಡ್ರಸ್‍ಗಳು,ಪಾಪ್‍ಕಾರ್ನ್, ಪಂಜು ಮಿಠಾಯಿ, ಬೇಲ್‍ಪುರಿ, ಪಾನಿಪುರಿ, ಚಾಟ್ಸ್, ಊಟಿ ಮೆಣಸಿನಕಾಯಿ ಬಜ್ಜಿ, ತಂಪು ಪಾನೀಯ, ಐಸ್ ಕ್ರೀಂ, ಡೆಲ್ಲಿ ಹಪ್ಪಳ ಸೇರಿದಂತೆ ಆಹಾರ ಪದಾರ್ಥಗಳು ದೊರೆಯಲಿವೆ.
ಸಂಜೆ 5 ರಿಂದ ರಾತ್ರಿ 9:30ರವರೆಗೆ ಈ ಪಾರ್ಕ್ ತೆರೆದಿರುತ್ತದೆ. 50 ರೂ ಪ್ರವೇಶ ಪಡೆದು ಈ ಪಾರ್ಕನ್ನು ಪ್ರವೇಶಿಸಬೇಕು.  ಒಳಗಡೆ ಬಂದ ಎಲ್ಲರಿಗೂ ಸೆಲ್ಪಿ ತಗೆದುಕೊಳ್ಳಲು  ಅವಕಾಶ ಕಲ್ಪಿಸಲಾಗಿದೆ .ಅಲ್ಲದೆ ಮಕ್ಕಳಿಗೆ, ದೊಡ್ಡವರಿಗೆ ವಿವಿಧ ಆಟೋಟಗಳಿಗೂ ಅವಕಾಶವಿದೆ.ಪ್ರತ್ಯೇಕ ದರ ಪಾವತಿಸಿ,ಆಟೋಟದಲ್ಲಿ ಪಾಲ್ಗೊಳ್ಳಬಹುದು.ಆಹಾರ ಪದಾರ್ಥ,ಗೃಹೋಪಯೋಗಿ ವಸ್ತುಗಳ ಖರೀದಿಗೂ ಅವಕಾಶವಿದೆ.ಇದೇ ಮೊದಲ ಬಾರಿಗೆ ಗೋಕಾಕದಲ್ಲಿ ಲಂಡನ್ ಬ್ರೀಜ್ ಮತ್ತು ಮಲೇಷ್ಯಾ ಟಾವರ್  ಸೆಟ್ ನಿರ್ಮಿಸಲಾಗಿದೆ. ಜನರು ಬಂದು ನೋಡುವ ಮೂಲಕ ತಮ್ಮ ಮನದ ಬೇಸರ ಕಳೆದುಕೊಳ್ಳಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಮ್ಯೂಜಮೆಂಟ್ ಪಾರ್ಕನ  ಮಾಲೀಕ ವಿಜಯ್ ವಿಲ್ಸನ್ ಉಪಸ್ಥಿತರಿದ್ದರು.

ಲಂಡನ್ ಬ್ರೀಜ್

Related posts: