RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ ಮುರುಘರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ : ಸಿದ್ದಲಿಂಗ ಮಹಾಸ್ವಾಮಿಗಳು

ಗೋಕಾಕ:ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ ಮುರುಘರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ : ಸಿದ್ದಲಿಂಗ ಮಹಾಸ್ವಾಮಿಗಳು 

ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ ಮುರುಘರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯ : ಸಿದ್ದಲಿಂಗ ಮಹಾಸ್ವಾಮಿಗಳು
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 25 :

 

ಕತ್ತಲೆಯನ್ನು ಬೆಳಕು ಮಾಡಿ ವೈಚಾರಿಕತೆಯಿಂದ ಹುಟ್ಟು ಹಬ್ಬವನ್ನು ಆಚರಿಸುವಂತೆ ನದಿ- ಇಂಗಳಗಾವನ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಶುಕ್ರವಾರದಂದು ನಗರದ ಶೂನ್ಯ ಸಂಪಾದನ ಮಠದಲ್ಲಿ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 50ನೇ ಜನ್ಮದಿನ ಹಾಗೂ 154ನೇ ಶಿವಾನುಭವಗೋಷ್ಠಿಯಲ್ಲಿ ಚಿಂತಕರಾಗಿ ಭಾಗವಹಿಸಿ ಮಾತನಾಡುತ್ತಾ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಕರಿಸದೆ ನಮ್ಮ ಸಂಸ್ಕೃತಿಯನ್ನು ಯುವ ಪೀಳಿಗೆ ಆಚರಣೆಗೆ ತರಬೇಕೆಂದು ಹೇಳಿದರು.

ಅನುಭಾವ, ದಾಸೋಹ ಹಾಗೂ ಒಳ್ಳೆಯ ಚಿಂತನೆಗಳೊಂದಿಗೆ ಈ ಭಾಗದಲ್ಲಿ ಆಧ್ಯಾತ್ಮಿಕ ಜಾಗೃತಿ ಮೂಡಿಸುತ್ತಿರುವ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ ಕಾರ್ಯ ಶ್ಲಾಘನೀಯವಾಗಿದೆ. ಸಂಪತ್ತು ಶಾಶ್ವತವಲ್ಲ ನಾವು ಮಾಡುವ ಒಳ್ಳೆಯ ಕಾರ್ಯಗಳು ಜನರ ಮನದಲ್ಲಿ ಶಾಶ್ವತವಾಗಿ ಉಳಿಯ ಬಲ್ಲವು. ನಿಶ್ವಾರ್ಥ ಸೇವೆಯಿಂದ ಬಡ ಮಕ್ಕಳಿಗೆ ಶಿಕ್ಷಣ ಅನ್ನದಾಸೋಹ, ಜ್ಞಾನ ದಾಸೋಹ ನೀಡುವ ಮೂಲಕ ಶ್ರೀಗಳು ಜನರ ಮನದಲ್ಲಿ ನೆಲೆಸಿದ್ದಾರೆ. ಭಕ್ತಾದಿಗಳು ಬಡ ಮಕ್ಕಳಿಗೆ ದೀನ ದಲಿತರಿಗೆ, ರೋಗಿಗಳಿಗೆ ಸಹಾಯ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಿರುವದು ಪ್ರಸಂಶನೀಯವಾಗಿದೆ.
ಭಕ್ತಾದಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾರ ತುರಾಯಿಗಳಿಗಿಂತ ಪ್ರೀತಿ ಭಕ್ತಿಯೇ ನಮ್ಮಗೆ ಶ್ರೇಷ್ಠವಾಗಿದೆ. ಹಸಿದವರಿಗೆ ಅನ್ನ ಹಾಗೂ ಬಡ ಮಕ್ಕಳಿಗೆ ಶಿಕ್ಷಣ ಕಲ್ಪಿಸುವ ಕಾರ್ಯವನ್ನು ಶ್ರೀಮಠ ಮಾಡುತ್ತಿದ್ದೆ. ಮುಂಬರುವ ದಿನಗಳಲ್ಲಿ ಬಡ ಜನತೆಗೆ ಉಚಿತ ಆರೋಗ್ಯ ಸೌಲಭ್ಯವನ್ನು ಕಲ್ಪಿಸುವ ಉದ್ದೇಶ ವಿದ್ದು, ಇದಕ್ಕೆ ಭಕ್ತರು ಸಹಕಾರ ನೀಡಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಸವಧರ್ಮ ಪ್ರಚಾರಕ ಸಂಸ್ಥೆ, ಲಿಂಗಾಯತ ಮಹಿಳಾ ವೇದಿಕೆ, ವಚನ ಸಾಹಿತ್ಯ ಚಿಂತನ ಮಂಥನ ವೇದಿಕೆ ಸೇರಿದಂತೆ ಭಕ್ತಾದಿಗಳು ಶ್ರೀಗಳನ್ನು ಗೌರವಿಸಿ ಆಶಿರ್ವಾದ ಪಡೆದರು.

ಕಾರ್ಯವನ್ನು ಎಸ್.ಕೆ ಮಠದ ಸ್ವಾಗತಿಸಿದರು, ಆರ್.ಎಲ್.ಮಿರ್ಜಿ ವಂದಿಸಿದರು.
ವೇದಿಕೆಯಲ್ಲಿ ನಾರಾಯಣ ಶರಣರು, ಬಸನಗೌಡ ಪಾಟೀಲ, ಡಾ.ಸಿ.ಕೆ.ನಾವಲಗಿ, ಸುಮಿತ್ರಾ ಗುರಾಣಿ, ಲೋಕಯ್ಯಾ ಹಿರೇಮಠ, ಪ್ರಸನ್ನ ಪಾಟೀಲ ಇದ್ದರು.

Related posts: