ಗೋಕಾಕ:ಹಿರಿಯ ಜೀವಿಗಳುಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕು : ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ
ಹಿರಿಯ ಜೀವಿಗಳುಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗಬೇಕು : ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 26 :
ಯುವ ಪೀಳಿಗೆಗೆ ಹಿರಿಯ ಜೀವಿಗಳು ತಮ್ಮ ಅನುಭವಧ ಜ್ಞಾನವನ್ನು ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಕರಾಗುವಂತೆ ಧಾರವಾಡದ ಶಿಕ್ಷಣ ತಜ್ಞ ಸುರೇಶ್ ಕುಲಕರ್ಣಿ ಹೇಳಿದರು .
ರವಿವಾರದಂದು ನಗರದ ರೋಟರಿ ರಕ್ತ ಭಂಡಾರದ ಸಭಾಂಗಣದಲ್ಲಿ ರೋಟರಿ ಸಂಸ್ಥೆ, ಗೋಕಾಕ ರೋಟರಿ ಸೇವಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ 75 ವಸಂತಗಳನ್ನು ಪೂರೈಸಿದ ಹಿರಿಯ ಜೀವಿಗಳನ್ನು ಗೌರವಿಸುವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿ ಅಂತ್ಯತ ಪವಿತ್ರವಾದದ್ದು , ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾಯಿಂದಿರು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಬೆಳೆಸಿ ಉತ್ತಮ ನಾಗರಿಕರನ್ನಾಗಿಸಿ ದೇಶಕ್ಕೆ ಕೊಡುಗೆ ನಿಡಿ. ಪರಸ್ಪರ ಪ್ರೀತಿ ವಿಶ್ವಾಸ ಹಾಗೂ ಸಹನೆಯಿಂದ ಕೂಡಿ ಬಾಳಿದರೆ ಮನೆ ಸ್ವರ್ಗವಾಗುವದು. ಯುವ ಜನತೆಯಲ್ಲಿ ದೇಶಾಭಿಮಾನ , ತಂದೆ ತಾಯಿಗಳಿಗೆ ಗೌರವ ನೀಡುವ ಅರಿವು ಮೂಡಿಸುವಂತೆ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಘೋಡಗೇರಿಯ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು
ಸ್ವಸ್ತ, ಸ್ವಚ್ಚ ಹಾಗೂ ಶಿಸ್ತುಬದ್ದ ಸಮಾಜ ನಿರ್ಮಿಸುವ ಉದ್ದೇಶದಿಂದ ರೋಟರಿ ಸಂಸ್ಥೆಯವರ ಸಮಾಜಮುಖಿ ಕಾರ್ಯಗಳು ಮಾದರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಗಣೇಶ ವರದಾಯಿ, ಕಾರ್ಯದರ್ಶಿ ದಿಲೀಪ್ ಮೆಳವಂಕಿ, ರೋಟರಿ ಸೇವಾ ಸಂಘದ ಚೇರಮನ್ ಮಲ್ಲಿಕಾರ್ಜುನ ಕಲ್ಲೋಳ್ಳಿ ,ಕಾರ್ಯದರ್ಶಿ ಸೋಮಶೇಖರ್, ಮಗದುಮ್ಮ, ಇನ್ನರವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ವರದಾಯಿ, ಕಾರ್ಯದರ್ಶಿ ವಿದ್ಯಾ ಗುಲ್ ಉಪಸ್ಥಿತರಿದ್ದರು
ವಿದ್ಯಾ ಮಗದುಮ್ಮ ಪ್ರಾರ್ಥಿಸಿದರು, ಸತೀಶ ನಾಡಗೌಡ ಸ್ವಾಗತಿಸಿದರು. ಮಹಾಂತೇಶ ತಾಂವಶಿ ವಂದಿಸಿದರು