ಗೋಕಾಕ:ಎಸಿಬಿ ಸಿಪಿಐ ಅಡಿವೇಶ ಗುದಿಗೊಪ್ಪ ಅವರಿಗೆ ಕರವೇ ವತಿಯಿಂದ ಸನ್ಮಾನ
ಎಸಿಬಿ ಸಿಪಿಐ ಅಡಿವೇಶ ಗುದಿಗೊಪ್ಪ ಅವರಿಗೆ ಕರವೇ ವತಿಯಿಂದ ಸನ್ಮಾನ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 26 :
ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ- ಬೆಳಗಾವಿ ಉತ್ತರ ವಲಯ)ದ ಸಿಪಿಐ ಅಡಿವೇಶ ಗುದಿಗೊಪ್ಪ ಅವರಿಗೆ ಮುಖ್ಯಮಂತ್ರಿ ಪದಕ ದೊರೆತ ನಿಮಿತ್ತ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕು ಘಟಕದ ವತಿಯಿಂದ ರವಿವಾರದಂದು ಬೆಳಗಾವಿಯ ಅವರ ಸ್ವ-ಗೃಹದಲ್ಲಿ ಅವರನ್ನು ಸತ್ಕರಿಸಿ , ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ, ಮುಖಂಡರುಗಳಾದ ಸಾದಿಕ ಹಲ್ಯಾಳ, ದೀಪಕ ಹಂಜಿ, ಮಹಾದೇವ ಮಕ್ಕಳಗೇರಿ, ಮುಗುಟ ಪೈಲವಾನ, ಕಾಂತು ದಳವಾಯಿ, ರಾಮ ಕುಡ್ಡೆಮ್ಮಿ ಇಸಾಕ ಶಿರೂರು, ರಮಜಾನ ಅಂಡಗಿ, ಸುಲ್ತಾನ್ ನಧಾಪ ಉಪಸ್ಥಿತರಿದ್ದರು