RNI NO. KARKAN/2006/27779|Friday, November 8, 2024
You are here: Home » breaking news » ಗೋಕಾಕ:ಕ್ರೀಡೆಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ : ಅಂಬಿರಾವ ಪಾಟೀಲ

ಗೋಕಾಕ:ಕ್ರೀಡೆಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ : ಅಂಬಿರಾವ ಪಾಟೀಲ 

ಕ್ರೀಡೆಗಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತವೆ : ಅಂಬಿರಾವ ಪಾಟೀಲ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 26 :

 

ಮಾನಸಿಕ ಮತ್ತು ದೈಹಿಕಬೆಳವಣಿಗೆಗೆ ಕ್ರೀಡೆಗಳು ಸಹಕಾರಿಯಾಗುವದರ ಜೊತೆಗೆ ಭಾಂದವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಹೇಳಿದರು.
ಅವರು, ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಲ್.ಆರ್.ಜೆ ಸೀಸನ್-4 ಕ್ರೀಕೇಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ನಗದು ಬಹುಮಾನ ಮತ್ತು ಟ್ರೋಫಿ ವಿತರಿಸಿ ಮಾತನಾಡುತ್ತ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವದು ಮುಖ್ಯವಾಗಿದೆ. ಯುವ ಪೀಳಿಗೆ ಇಂತಹ ಕ್ರೀಡಾಕೂಟಗಳಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ಸದೃಢ ಆರೋಗ್ಯವಂತರಾಗಿರೆಂದು ಹಾರೈಸಿದರು.
ಈ ಪಂದ್ಯಾವಳಿಯಲ್ಲಿ ಕೊಲ್ಹಾಪೂರದ ತಂಡ ಪ್ರಥಮ ಸ್ಥಾನ ಪಡೆದು ಶಾಸಕ ರಮೇಶ ಜಾರಕಿಹೊಳಿ ಅವರು ನೀಡಿದ 1.5ಲಕ್ಷ ರೂ ನಗದು ಹಾಗೂ ಟ್ರೋಫಿಯನ್ನು ಪಡೆದರು. ದ್ವಿತೀಯ ಸ್ಥಾನ ಪಡೆದ ರಬಕವಿ ತಂಡ ವಿಧಾನ ಪರಿಷತ ಸದಸ್ಯ ಲಖನ್ ಜಾರಕಿಹೊಳಿ ಅವರು ನೀಡಿದ 75ಸಾವಿರ ರೂ ನಗದು ಹಾಗೂ ಟ್ರೋಫಿಯನ್ನು ತಮ್ಮದಾಗಿಸಿಕೊಂಡರು.
ಈ ಸಂದರ್ಭದಲ್ಲಿ ಡಿವೈಎಸ್‍ಪಿ ಮನೋಜಕುಮಾರ ನಾಯ್ಕ, ನಗರಸಭೆ ಸದಸ್ಯ ಕುತ್ಬುದ್ದಿನ ಗೋಕಾಕ, ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ, ಅಂಜುಮನ್ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ವಿಠ್ಠಲ ಜೋಶಿ ಆಯೋಜಕರಾದ ಸಂತೋಷ ನಾಯ್ಕ, ಹನೀಫ್ ಶಭಾಶಖಾನ, ತಾಜಾವುದ್ದಿನ ಘೋಡಗೇರಿ, ಮೌಲಾಅಲಿ ಮುಲ್ಲಾ, ಅತ್ತಾವುಲ್ಲ ದೇಸಾಯಿ, ದಸ್ತಗೀರ ಶಭಾಶಖಾನ, ಅನೀಲ ಮುರಾರಿ, ರಾಜು ಹೆಗ್ಗನ್ನವರ, ಪ್ರವೀನ ಸಿಂಪ್ರೆ, ಬಾಬು ಶೇಖಬಡೆ ಸೇರಿದಂತೆ ಅನೇಕರು ಇದ್ದರು.

Related posts: